ಬೆಂಗಳೂರು ಜನಸಂದಣಿ ತಪ್ಪಿಸಲು ಕೆಜಿಎಫ್`ನಲ್ಲಿ ತಲೆ ಎತ್ತಲಿದೆ ನವನಗರ

ಬುಧವಾರ, 8 ಮಾರ್ಚ್ 2017 (11:47 IST)
ಬೆಂಗಳೂರು(ಮಾ.07): ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೆಂಗಳೂರು ನಗರದ ಜನಸಂದಣಿ ತಪ್ಪಿಸಲು ಕೆಜಿಎಫ್ ಬಳಿ ನವನಗರ ನಿರ್ಮಾಣಕ್ಕೆ ಸರ್ಕಾರ ಚಿಂತನೆ ನಡೆಸಿದೆ.


ಬೆಂಗಳೂರಿನಿಂದ 100 ಕಿ.ಮೀ ದೂರದಲ್ಲಿರುವ ಕೋಲಾರ್ ಗೋಲ್ಡ್ ಫೀಲ್ಡ್`ನ 11,000 ಎಕರೆ ಪ್ರದೇಶದಲ್ಲಿ ಹೊಸ ನಗರ ಸೃಷ್ಟಿಗೆ ಯೋಜಿಸಲಾಗುತ್ತಿದ್ದು, ಇಲ್ಲಿ ಬೆಂಗಳೂರಿನ 20 ಲಕ್ಷ ಜನರಿಗೆ ಜನವಸತಿ ಕಲ್ಪಿಸುವ ಉದ್ಧೇಶ ಹೊಂದಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ರೋಶನ್ ಬೇಗ್ ತಿಳಿಸಿದ್ದಾರೆ. ಹೊಸ ನಗರಕ್ಕೆ ಅಗತ್ಯವಿರುವ ನೀರಿಗಾಗಿ ಮಂಗಳೂರಿನಲ್ಲಿ ಸಮುದ್ರ ನೀರು ಶುದ್ಧೀಕರಣ ಘಟಕ ಸ್ಥಾಪಿಸಿ ಅಲ್ಲಿಂದ ತರಲಾಗುತ್ತೆ ಮತ್ತು ಎತ್ತಿನಹೊಳೆ ನೀರನ್ನ ಬಳಕೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಯೋಜನೆಗೆ ಗ್ಲೋಬಲ್ ಟೆಂಡರ್ ಮೂಲಕ ಸಾಧ್ಯತಾ ವರದಿ ಪಡೆದು ಕ್ರಿಯಾಯೋಜನೆ ರೂಪಿಸಲು ಚಿಂತನೆ ನಡೆಸಲಾಗಿದೆ. ಇದರ ಜೊತೆಗೆ ನೆಲಮಂಗಲ, ದೊಡ್ಡಬಳ್ಳಾಪುರ, ಬಿಡದಿ, ದಾಬಸ್ ಪೇಟೆ, ಹಾರೋಹಳ್ಳಿಯಲ್ಲಿ ಎಡಿಬಿ ನೆರವಿನೊಂದಿಗೆ ಕ್ಲಸ್ಟರ್ ಸಿಟಿ ಅಭಿವೃದ್ಧಿ ಯೋಜನೆಯಡಿ ನವನಗರ ನಿರ್ಮಾಣಕ್ಕೂ ಯೋಜಿಸಲಾಗಿದೆ.

ವೆಬ್ದುನಿಯಾವನ್ನು ಓದಿ