ಯಡಿಯೂರಪ್ಪ ವಿರುದ್ಧ ಸುಳ್ಳು ಹೇಳಲು ಒತ್ತಡ: ಗವರ್ನರ್`ಗೆ ಅಧಿಕಾರಿ ಬಸವ ರಾಜೇಂದ್ರ ಪತ್ರ

ಶನಿವಾರ, 19 ಆಗಸ್ಟ್ 2017 (15:26 IST)
ಎಸಿಬಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ದಾಖಲಾಗಿರುವ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ವಿರುದ್ಧ ಹೇಳಿಕೆ ನೀಡುವಂತೆ ಭೂಸ್ವಾಧೀನಾಧಿಕಾರಿಯಾಗಿದ್ದ ಬಸವರಾಜೇಂದ್ರ ಅವರಿಗೆ ಎಸಿಬಿ ಅಧಿಕಾರಿಗಳೇ ಒತ್ತಡ ಹೇರಿರುವ ಆರೋಪ ಕೇಳಿಬಂದಿದೆ.

ಎಸಿಬಿ ಡಿವೈಎಸ್ಪಿಗಳೇ ನನಗೆ ಫೋನ್ ಕರೆ ಮಾಡಿ ಕರೆಸಿಕೊಂಡು ಎಸಿಬಿ ಕಚೇರಿಯಲ್ಲಿ ಯಡಿಯೂರಪ್ಪ ವಿರುದ್ಧ ಹೇಳಿಕೆ ನೀಡಿ, ಇಲ್ಲವಾದರೆ ನಿಮ್ಮನ್ನ ಆರೋಪಿಯನ್ನಾಗಿಸುವುದಾಗಿ ಬೆದರಿಕೆ ಹಾಕಿದ್ದಾರೆಂದು 2010-11ರಲ್ಲಿ ಭೂಸ್ವಾಧೀನಾಧಿಕಾರಿಯಾಗಿದ್ದ ಕೆಎಎಸ್ ಅಧಿಕಾರಿ ಬಸವ ರಾಜೇಂದ್ರ ಗವರ್ನರ್`ಗೆ ಪತ್ರ ಬರೆದು ತಿಳಿಸಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ.

ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೆಶನ್ ಪ್ರಕರಣ ಸಂಬಂಧ ಆಗಸ್ಟ್ 10ರಂದು ಕರೆ ಮಾಡಿ ಕರೆಸಿಕೊಂಡಿದ್ದ ಎಸಿಬಿಯ ಬಾಲರಾಜ್ ಮತ್ತು ಆಂಥೋನಿ ವಿಚಾರಣೆ ನಡೆಸಿದ್ದರು. ಈ ಸಂದರ್ಭ ನನ್ನ ಮೇಲೆ ಒತ್ತಡ ಹೇರಿದ್ದಾರೆ ಎಂದು ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಗಣಿ ಇಲಾಖೆಯ ಉಪ ಕಾರ್ಯದರ್ಶಿಯಾಗಿ ಬಸವ ರಾಜೇಂದ್ರ ಕಾರ್ಯನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ