ರಾಜ್ಯಪಾಲ ವಜುಭಾಯಿ ವಾಲಾ ಭರ್ಜರಿ ವಿಮಾನ ಹಾರಾಟ; 2.89 ಕೋಟಿ ದುಂದು ವೆಚ್ಚ

ಶನಿವಾರ, 10 ಸೆಪ್ಟಂಬರ್ 2016 (16:30 IST)
ರಾಜ್ಯಪಾಲ ವಜುಭಾಯಿ ವಾಲಾ ತಮ್ಮ 20 ತಿಂಗಳ ಅವಧಿಯಲ್ಲಿ ವಿಮಾನ ಹಾರಾಟಗಳಿಗಾಗಿ 2.89 ಕೋಟಿ ರೂಪಾಯಿ ವೆಚ್ಚ ಮಾಡಿರುವ ಆಘಾತಕಾರಿ ಅಂಶ ಬಹಿರಂಗವಾಗಿದೆ.
 
ಆರ್‌ಟಿಐ ಮಾಹಿತಿ ಪ್ರಕಾರ, ಹಿಂದಿನ ರಾಜ್ಯಪಾಲ ಹಂಸರಾಜ್ ಭಾರಧ್ವಾಜ್ ತಮ್ಮ ಐದು ವರ್ಷ ಅಧಿಕಾರವಧಿಯಲ್ಲಿ 67 ಲಕ್ಷ ರೂಪಾಯಿಗಳನ್ನು ವಿಮಾನ ಹಾರಾಟದ ವೆಚ್ಚಕ್ಕಾಗಿ ಬಳಸಿಕೊಂಡಿದ್ದರು. ಆದರೆ, ವಜುಭಾಯಿ ವಾಲಾ ಕೇವಲ 20 ತಿಂಗಳಲ್ಲಿ 2.89 ಕೋಟಿ ರೂಪಾಯಿ ವಿಮಾನ ಹಾರಾಟಕ್ಕಾಗಿ ವೆಚ್ಚ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
 
ಬೆಂಗಳೂರಿನಿಂದ ಮೈಸೂರಿಗೆ ಮತ್ತು ಬೆಂಗಳೂರಿನಿಂದ ಗುಜರಾತಿಗೆ ತೆರಳುವಾಗಲು ಕೂಡಾ ವಿಶೇಷ ವಿಮಾನ ಬಳಸಿಕೊಂಡಿರುವುದು ಬಹಿರಂಗವಾಗಿದೆ.
 
ಸಾರ್ವಜನಿಕ ಹಣವನ್ನು ಮನಬಂದಂತೆ ಪೋಲು ಮಾಡುವುದು ಸರಿಯೇ ಎನ್ನುವ ಪ್ರಶ್ನೆಯನ್ನು ಸಾಮಾಜಿಕ ಕಾರ್ಯಕರ್ತರು ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ