ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡುವುದನ್ನು ನಿಲ್ಲಿಸಬೇಕು: ಪೇಜಾವರ ಶ್ರೀ

ಶುಕ್ರವಾರ, 26 ಡಿಸೆಂಬರ್ 2014 (10:54 IST)
ಸರ್ಕಾರ ಇನ್ನು ಮುಂದೆ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡುವುದನ್ನು ನಿಲ್ಲಿಸಬೇಕು ಎಂದು ಜಿಲ್ಲೆಯ ಶ್ರೀಕೃಷ್ಣ ಮಠದ ಪೀಠಾಧ್ಯಕ್ಷ ಪೇಜಾವರ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಸಾಕಷ್ಟು ಮಂದಿ ಸಾಧಕರಿದ್ದು, ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಸಮಾಜದ ಸುಧಾರಣೆ ಹಾಗೂ ದೇಶದ ಅಭಿವೃದ್ಧಿಗೆ ಮಹತ್ವ ಪೂರ್ಣವಾದ ಕೊಡುಗೆ, ಕಾಣಿಕೆ ಸಲ್ಲಿಸಿದವರಿದ್ದಾರೆ. ಅವರೆಲ್ಲರೂ ನಿಧನರಾಗಿದ್ದು, ಎಲ್ಲರೂ ಕೂಡ ಪ್ರಶಸ್ತಿಗೆ ಅರ್ಹರೇ. ಆದ ಕಾರಣ ಎಲ್ಲರಿಗೂ ಇಂತಹ ಅತ್ಯುನ್ನತ ಪ್ರಶಸ್ತಿಯನ್ನು ನೀಡಲು ಸಾಧ್ಯವಿಲ್ಲ. ಅಲ್ಲದೆ ಪರಿಗಣಿಸುವಾಗ ಸಾಕಷ್ಟು ಗೊಂದಲಗಳು ಏರ್ಪಡುತ್ತವೆ. ಯಾರಾದರೂ ಓರ್ವರಿಗೆ ನೀಡಿದಲ್ಲಿ ಮತ್ತೋರ್ವರ ಅಭಿಮಾನಿಗಳಿಗೆ ಬೇಸರವಾಗುತ್ತದೆ. ಹಾಗಾಗಿ ಸರ್ಕಾರ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡುವುದನ್ನು ನಿಲ್ಲಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. 
 
ವಿಶ್ವ ಹಿಂದೂ ಸಭಾ ಹಾಗೂ ಬನಾರಸ್ ವಿವಿಯ ಸಂಸ್ಥಾಪಕ ಮದನ ಮೋಹನ ಮಾಳವೀಯಾಗೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ನಿನ್ನೆ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಿರುವ ಹಿನ್ನೆಲೆಯಲ್ಲಿ ಶ್ರೀಗಳು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ.  

ವೆಬ್ದುನಿಯಾವನ್ನು ಓದಿ