ಸಮಾವೇಶದಲ್ಲಿ ಜಮೀರ್ ಅಹ್ಮದ್ ವಿರುದ್ಧ ಗರಂ ಆದ ಗೌಡರು

ಶನಿವಾರ, 24 ಜನವರಿ 2015 (15:46 IST)
ಜೆಡಿಎಸ್ ಪಕ್ಷ ಸಂಘಟನೆಗೆ ಪಣತೊಟ್ಟು ಇಂದು ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಪಕ್ಷದ ವರಿಷ್ಠ ದೇವೇಗೌಡರು ಮಾತನಾಡಿದ್ದು, ಸಿದ್ದರಾಮಯ್ಯನವರು ದೌರ್ಭಾಗ್ಯವೊಂದನ್ನು ಬಿಟ್ಟು ಎಲ್ಲಾ ಭಾಗ್ಯವನ್ನೂ ಕೊಟ್ಟಿದ್ದಾರೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. 
 
ಸಮಾರಂಭದಲ್ಲಿ ಮಾತನಾಡಿದ ಗೌಡರು, ಸಮಾವೇಶದಲ್ಲಿ ಭಾಗವಹಿಸುವಂತೆ ಪಕ್ಷದ ಎಲ್ಲಾ ನಾಯಕರಿಗೆ ಕಟ್ಟುನಿಟ್ಟಾಗಿ ಆದೇಶಿಸಿದ್ದರೂ ಕೆಲವರು ನನಗೆ ಆಹ್ವಾನ ಬರಲಿಲ್ಲ ಎಂದು ಹೇಳುತ್ತಿದ್ದಾರೆ. ನಾನು ಆಗೊಮ್ಮೆ ತೋಟ ಮಾರಬೇಕೆಂದಿದ್ದೆ, ಆದರೆ ಯಾರೋ ಒಬ್ಬರು ಬಂದು ಓಲ್ವೋ ಬಸ್ಸಿನಲ್ಲಿ ಕರೆದುಕೊಂಡು ಹೋದರು ಎನ್ನುವ ಮೂಲಕ ಆಹ್ವಾನ ಬರಲಿಲ್ಲ ಎಂದು ಹೇಳಿ ಗೈರು ಹಾಜರಾಗಿದ್ದ ಶಾಸಕ ಜಮೀರ್ ಅಹ್ಮದ್ ವಿರುದ್ಧ ಮಾರ್ಮಿಕವಾಗಿ ಚಾಟಿ ಬೀಸಿದರು. 
 
ಬಳಿಕ, ಭಿನ್ನ ಮತೀಯರನ್ನು ಪಕ್ಷಕ್ಕೆ ಕರೆ ತರುವಲ್ಲಿ ಕುಮಾರಸ್ವಾಮಿ ಪದೇ ಪದೇ ಮುಂದಾಗುತ್ತಿದ್ದು, ಇಂತಹ ವರ್ತನೆಯನ್ನು ಇನ್ನುಮುಂದೆ ಕೈ ಬಿಡಬೇಕು. ಭಿನ್ನಮತೀಯರನ್ನು ಓಲೈಸುವ ಕಾರ್ಯಕ್ಕೆ ಮತ್ತೆಂದೂ ಮುಂದಗಬಾರದು ಎಂದು ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದರು. 
 
ಇನ್ನು ಕಡೂರು ವಿಧಾನಸಭಾ ಕ್ಷೇತ್ರದ ಶಾಸಕ ವೈ.ಎಸ್.ವಿ. ದತ್ತ ಅವರು ನಮ್ಮ ಪಕ್ಷದಲ್ಲಿಯೇ ಉಳಿಯಬೇಕು. ನಾನು ಸತ್ತರೂ ಕೂಡ ಪಕ್ಷ ರಾಜ್ಯದಲ್ಲಿ ಉಳಿಯಬೇಕು ಎಂದು ಭಾವುಕರಾದರು. 

ವೆಬ್ದುನಿಯಾವನ್ನು ಓದಿ