ಜಾನಪದ ವಿವಿಯ ಸಂದರ್ಶನಕ್ಕೆ ಬ್ರೇಕ್ ಹಾಕಿದ ಗೋಯಲ್

ಸೋಮವಾರ, 22 ಡಿಸೆಂಬರ್ 2014 (12:38 IST)
ಹಾವೇರಿ ಜಿಲ್ಲೆಯ ಜಾನಪದ ವಿಶ್ವ ವಿದ್ಯಾಲಯದಲ್ಲಿನ ಹಲವು ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸಂದರ್ಶನ ನಡೆಯುತ್ತಿದ್ದು, ಸಂದರ್ಶವನ್ನು ರದ್ದುಗೊಳಿಸುಂತೆ ಉನ್ನತ ಶಿಕ್ಷಣ ಇಲಾಖೆ ಆದೇಶಿಸಿದೆ. 
 
ಇಲಾಖೆಯ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯಲ್ ಈ ಆದೇಶವನ್ನು ಹೊಡಿಸಿದ್ದು, ಯುಜಿಸಿ ನಿಯಮಾವಳಿಗಳನ್ನು ಉಲ್ಲಂಘಿಸಿ ಸಂದರ್ಶನ ನಡೆಸಲಾಗುತ್ತಿದೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಸಂದರ್ಶನವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.  
 
ಈ ವಿಶ್ವ ವಿದ್ಯಾಲಯವು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಗೋಟಗೊಡಿಯಲ್ಲಿ ಸ್ಥಾಪನೆಗೊಂಡಿದ್ದು, ಜೂನ್ 16 ರಂದು ಲೋಕಾರ್ಪಣೆಗೊಂಡಿತ್ತು. ಅಲ್ಲದೆ ಇದು ದೇಶದ ಪ್ರಪ್ರಥಮ ಜಾನಪದ ವಿಶ್ವವಿದ್ಯಾಲಯ ಎಂಬ ಖ್ಯಾತಿಗೂ ಒಳಗಾಗಿತ್ತು. ಇನ್ನು ಇಂತಹ ಚಟುವಟಿಕೆಗಳು ಆರಂಭದಲ್ಲಿಯೇ ಕಂಡು ಬರುತ್ತಿರುವುದರಿಂದ ಮುಂದೆ ವಿವಿಗೆ ಕೆಟ್ಟ ಹೆಸರು ಬರಬಹುದು ಎಂಬ ಹಿನ್ನೆಲೆಯಲ್ಲಿ ಪ್ರಧಾನ ಕಾರ್ಯದರ್ಶಿಗಳು ಸಂದರ್ಶನಕ್ಕೆ ಬ್ರೇಕ್ ಹಾಕಿದ್ದಾರೆ ಎನ್ನಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ