ಪರಭಾಷಾ ಚಿತ್ರಗಳ ಡಬ್ಬಿಂಗ್‌ಗೆ ಗ್ರೀನ್ ಸಿಗ್ನಲ್ : ವಾಣಿಜ್ಯ ಮಂಡಳಿಗೆ ಹಿನ್ನಡೆ

ಗುರುವಾರ, 20 ನವೆಂಬರ್ 2014 (16:21 IST)
ಪರಭಾಷಾ ಚಿತ್ರಗಳ ಡಬ್ಬಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ವಾಣಿಜ್ಯಮಂಡಳಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ವಜಾಮಾಡಿದ್ದರಿಂದ ವಾಣಿಜ್ಯಮಂಡಳಿಗೆ ತೀವ್ರ ಹಿನ್ನಡೆಯಾಗಿದೆ.  ಕರ್ನಾಟಕ ಗ್ರಾಹಕರ ಕೂಟ ಸ್ಪರ್ಧಾ ಆಯೋಗಕ್ಕೆ ದೂರು ಸಲ್ಲಿಸಿ ತಮಗೆ ಪರಭಾಷಾ ಚಿತ್ರಗಳು ಮತ್ತು ಧಾರಾವಾಹಿಗಳ ಡಬ್ಬಿಂಗ್‌ಗೆ  ಅವಕಾಶ ನೀಡುತ್ತಿಲ್ಲ ಎಂದು ದೂರನ್ನು ಸಲ್ಲಿಸಿತ್ತು.

 ರಾಮಾಯಣ, ಮಹಾಭಾರತ, ಲವಕುಶ ಮುಂತಾದ ಧಾರಾವಾಹಿಗಳ ಡಬ್ಬಿಂಗ್‌ಗೆ ಅವಕಾಶ ನೀಡುತ್ತಿಲ್ಲ ಎಂದು ಗ್ರಾಹಕರ ಕೂಟ ದೂರನ್ನು ನೀಡಿತ್ತು. ಈ ಕುರಿತು ತನಿಖೆ ನಡೆಸುವಂತೆ ಸ್ಪರ್ಧಾ ಆಯೋಗ ಡಿಜಿಐಗೆ ಸೂಚಿಸಿತ್ತು. ತನಿಖಾ ಆದೇಶ ಪ್ರಶ್ನಿಸಿ ವಾಣಿಜ್ಯ ಮಂಡಳಿ ಹೈಕೋರ್ಟ್‌ನಲ್ಲಿ ರಿಟ್ ಸಲ್ಲಿಸಿತ್ತು.

ಆದರೆ  ಹೈಕೋರ್ಟ್ ತೀರ್ಪಿನಿಂದ ವಾಣಿಜ್ಯ ಮಂಡಳಿ ಸ್ಪರ್ಧಾ ಆಯೋಗದ ತೀರ್ಪಿಗೆ ಬದ್ಧವಾಗಿರಬೇಕಾಗುತ್ತದೆ. ಸ್ಪರ್ಧಾ ಆಯೋಗಕ್ಕೆ ತಮ್ಮ ಆಕ್ಷೇಪ ಸಲ್ಲಿಸಬಹುದು ಎಂದು ಹೈಕೋರ್ಟ್ ವಾಣಿಜ್ಯ ಮಂಡಳಿಗೆ ತಿಳಿಸಿದೆ.ಕರ್ನಾಟಕದಲ್ಲಿ ಡಬ್ಬಿಂಗ್‌ಗೆ ಅವಕಾಶವಿಲ್ಲ. ಡಬ್ಬಿಂಗ್‌ ಇದ್ದ ನಿರ್ಬಂಧ ಕೋರ್ಟ್ ತೆಗೆದುಹಾಕಿದ್ದು, ಮುಂದಿನ ಕಾನೂನು ಕ್ರಮದ ಬಗ್ಗೆ ಯೋಚಿಸಬೇಕಿದೆ.
 

ವೆಬ್ದುನಿಯಾವನ್ನು ಓದಿ