ಸಚಿವ ಖಮರುಲ್‌‌ ಇಸ್ಲಾಂ ವಿರುದ್ದ ಗುಲ್ಬರ್ಗಾದ ಜನರು ಗರಂ

ಶುಕ್ರವಾರ, 29 ಆಗಸ್ಟ್ 2014 (12:46 IST)
ಗುಲ್ಬರ್ಗಾದಲ್ಲಿ ಮಳೆಯ ಅರ್ಭಟ ಜೋರಾಗಿ ಸಾಕಷ್ಟಯ ತೊಂದರೆ ಯಾಗಿದ್ದರು ಕೂಡ. ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್‌‌ ಇಸ್ಲಾಂ ಈ ಕುರಿತು ಯಾವುದೇ ಗಮನ ನಿಡುತ್ತಿಲ್ಲ ಎಂದು ಸ್ಥಳಿಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
 
ರಾಜ್ಯದಲ್ಲಿ ವರುಣನ ಅರ್ಬಟ ಜೋರಾಗಿದೆ. ಇದರಿಂದ ಹಲವು ನಗರಗಳಲ್ಲಿ ಮಳೆಯಿಂದ ನೀರು ಮನೆಯೊಳಗೆ ನುಸುಳಿ ಸಾರ್ವಜನಿಕರಿಗೆ ಸಾಕಷ್ಟು ತುಂಬಾ ತೊಂದರೆ ಮಾಡುತ್ತಿವೆ. ಬಿಸಿಲ ನಾಡು ಗುಲ್ಬರರ್ಗಾದಲ್ಲಿ ಕೂಡ ಕೆಲದಿನಗಳಿಂದ ವರುಣನ ಅರ್ಭಟ ಜೋರಾಗಿದೆ. ಆದರೆ, ಮಳೆಯಿಂದ ಸಾರ್ವಜನಿಕರಿಗೆ ತುಂಬಾನೆ ತೊಂದರೆಯಾಗುತ್ತಿದ್ದರೂ ಕೂಡ ವಕ್ಫ್ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್‌ ಇಸ್ಲಾಂ ಸರಿಯಾದ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
 
ಅತಿಯಾದ ಮಳೆಯಿಂದ ನಗರದ ರಸ್ತೆಗಳಲ್ಲಿ ನೀರು ತುಂಬಿದಷ್ಟೆ ಅಲ್ಲ, ಮನೆಯೊಳಗಡೆ ಕೂಡ ನೀರು ಸೇರಿವೆ. ಡ್ರೇನೆಜ್‌‌ಗಳು ಕೂಡ ಮಳೆಯಿಂದ ಒಡೆದು ಹೊರಗಡೆ ಎಲ್ಲಾ ಹೊಲಸು  ಬರುತ್ತಿದೆ. ಇದರಿಂದ ಕೊಳಕು ವಾಸನೆ ಬಂದು ಜನರಿಗೆ ಅನಾರೋಗ್ಯದ ಭೀತಿ ಕಾಡುತ್ತಿದೆ. 
 
ಈ ಕುರಿತು ಸ್ಥಳಿಯ ಪಾಲೀಕೆ, ಸ್ಥಳಿಯ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಗಮನ ಹರಿಸುತ್ತಿಲ್ಲ. ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ವಹಿಸಿಕೊಂಡ ಕಾಂಗ್ರೆಸ್‌‌ನ ಹಿರಿಯ ಮುಖಂಡರಾದ ಖಮರುಲ್‌‌ ಇಸ್ಲಾಂ ಮಳೆಯ ಹಾನಿಯಿಂದ ಜನರಿಗಾದ ನಷ್ಟದ ಕಡೆಗೆ ಯಾವುದೇ ರೀತಿಯಲ್ಲಿ ಸ್ಪಂದನೆ ಮಾಡುತ್ತಿಲ್ಲ ಎಂದು ಸ್ಥಳೀಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ