ಎಚ್.ಡಿ.ರೇವಣ್ಣ ವಿದ್ಯಾವಂತರಂತೆ ಮಾತನಾಡಲಿ: ಎ.ಮಂಜು

ಸೋಮವಾರ, 6 ಜೂನ್ 2016 (18:18 IST)
ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ವಿದ್ಯಾವಂತರಂತೆ ಮಾತನಾಡುವುದನ್ನು ಕಲಿಯಲಿ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಟಾಂಗ್ ನೀಡಿದ್ದಾರೆ.
 
ಪರಿಷತ್ ಚುನಾವಣೆ ಖರ್ಚಿಗಾಗಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದು, ಅವರನ್ನು ನಗರದ ಐಬಿಗೆ ಕರೆಸಿ ಸಭೆ ನಡೆಸಿದ್ದಾರೆಂದು ಗಂಭೀರವಾಗಿ ಆರೋಪಿಸಿದ್ದರು. 
 
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಎ.ಮಂಜು, ನಾನು ಐಬಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸುವಾಗ ರೇವಣ್ಣನವರು ನನ್ನ ಪಕ್ಕದ ಕೊಣೆಯಲ್ಲೇ ಇರುವುದು ಅವರಿಗೆ ಮರೆತು ಹೋಗಿರಬೇಕು. ಅವರು ಸಹ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ನಾನು ಆರೋಪಿಸಬಹುದಾಗಿತ್ತು ಎಂದು ತಿರುಗೇಟು ನೀಡಿದ್ದಾರೆ.
 
ಜೆಡಿಎಸ್ ಅವಧಿಯಲ್ಲಿ ಚುನಾವಣೆ ಖರ್ಚಿಗೆಂದು ಹಣ ವಸೂಲಿ ಮಾಡಲಾಗುತ್ತಿತ್ತು. ಅದನ್ನು ನನಗೆ ಹೋಲಿಕೆ ಮಾಡಿ ರೇವಣ್ಣವರು ಹೇಳುತ್ತಿದ್ದಾರೆ ಎಂದು ಎ.ಮಂಜು ಟಾಂಗ್ ನೀಡಿದ್ದಾರೆ.
 
ನಗರದಲ್ಲಿರುವ ಐಬಿಗೆ ಅದಿಕಾರಿಗಳನ್ನು ಕರೆದಿದ್ದು ನಿಜ. ಆದರೆ, ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚೆ ನಡೆಸಲು ಸಭೆ ಕರೆದಿದ್ದೆ. ಇದು ನೀತಿ ಸಂಹಿತೆ ಉಲ್ಲಂಘನೆಯಾಗಲು ಸಾಧ್ಯವೆ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ