ನ್ಯೂ ಇಂಗ್ಲೀಷ್ ಶಾಲೆಯಲ್ಲಿ ಶಿಕ್ಷಕನ ವಿರುದ್ಧ ಕಿರುಕುಳದ ದೂರು

ಮಂಗಳವಾರ, 22 ಜುಲೈ 2014 (11:27 IST)
ಹುಬ್ಬಳ್ಳಿಯ ನ್ಯೂ ಇಂಗ್ಲೀಷ್ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಶಿಕ್ಷಕ ಸಂಜೀವ್ ವಿರುದ್ಧ ಆರೋಪ ಮಾಡಿದ್ದಾರೆ.  ಗಣಿತ ಶಿಕ್ಷಕರು ತಮಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು  ಆಡಳಿತ ಮಂಡಳಿಗೆ ಶಿಕ್ಷಕಿ ಲಿಖಿತ ದೂರು ಸಲ್ಲಿಸಿದ್ದಾರೆ.

ಆದರೆ ಶಿಕ್ಷಕ ಸಂಜೀವ್ ಬೆಂಬಲಕ್ಕೆ ವಿದ್ಯಾರ್ಥಿಗಳು ನಿಂತಿದ್ದು, ಶಿಕ್ಷಕಿಯ ಆರೋಪಗಳು ಸುಳ್ಳು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.   ಮಕ್ಕಳಿಂದ ಹಣವಸೂಲಿ ಮಾಡುತ್ತಿದ್ದ ಶಿಕ್ಷಕಿಯನ್ನು  ಪ್ರಶ್ನಿಸಿದ ತಮ್ಮ ವಿರುದ್ಧ ಆರೋಪ ಹೊರಿಸಲಾಗುತ್ತಿದೆ ಎಂಬ ಸಂಜೀವ್ ಹೇಳಿದ್ದಾರೆ.

ಆದರ ಶಿಕ್ಷಕಿ ಹೇಳುವುದೇನೆಂದರೆ ಸಂಜೀವ್ ಕೋಣೆಗೆ ಅನಾವಶ್ಯಕವಾಗಿ ಬಂದು ಕೈ ಮುಟ್ಟಿ, ಮೈ ಮುಟ್ಟಿ ಮಾತನಾಡುವುದು, ರಸ್ತೆಯಲ್ಲಿ ಅಡ್ಡವಾಗಿ ನಿಂತು ಮಾತನಾಡುವುದು ಮಾಡುತ್ತಿದ್ದರೆಂದು ಶಿಕ್ಷಕಿ ಆರೋಪಿಸಿದ್ದಾರೆ. ತಮ್ಮ ಬೆಂಬಲಕ್ಕೆ ವಿದ್ಯಾರ್ಥಿಗಳ ನೆರವು ಪಡೆದು ತಮ್ಮ ತಪ್ಪನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆಂದು ಅವರು ಆರೋಪಿಸಿದ್ದಾರೆ.  

ವೆಬ್ದುನಿಯಾವನ್ನು ಓದಿ