21 ವರ್ಷಗಳ ಹಾಸನ ಜಿಲ್ಲೆಯ ಜನರ ಕನಸು ನನಸು

ಭಾನುವಾರ, 26 ಮಾರ್ಚ್ 2017 (10:26 IST)
ಮಾಜಿ ಪ್ರಧಾನಿ ದೇವೇಗೌಡರ ಕಾಲದಲ್ಲಿ ಮಂಜೂರಾಗಿದ್ದ ಹಾಸನ ಮತ್ತು ಬೆಂಗಳೂರು ರೈಲು ಸಂಚಾರಕ್ಕೆ ಇಂದು ಚಾಲನೆ ಸಿಕ್ಕಿದೆ. ರೈಲ್ವೆ ಸಚಿವ ಸುರೇಶ್ ಪ್ರಭು ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಯೋಜನೆಗೆ ಚಾಲನೆ ನೀಡಿದರು. ಮಾಜಿ ಪ್ರಧಾನಿ ದೇವೇಗೌಡ, ಸಿಎಂ ಸಿದ್ದರಾಮಯ್ಯ, ಕೇಂದ್ಸರ ಸಚಿವ ಅನಂತ್ ಕುಮಾರ್, ಸಚಿವರಾದ ಆರ್.ವಿ. ದೇಶಪಾಂಡೆ, ಎ. ಮಂಜು ಮತ್ತಿತರರು ಉಪಸ್ಥಿತರಿದ್ದರು. 

ಬೆಳಗ್ಗೆ 6.30ಕ್ಕೆ ಹೊರಡುವ ರೈಲು 9.15ಕ್ಕೆ ಬೆಂಗಳೂರಿಗೆ ತೆರಳಲಿದೆ. ಸಂಜೆ 6.15ಕ್ಕೆ ಮತ್ತೆ ಬೆಂಗಳೂರಿನಿಂದ ತೆರಳಲಿದೆ. ಈ ಹೊಸ ರೈಲು ಮಾರ್ಗದಿಂದ ಬೆಂಗಳೂರು-ಹಾಸನದ ಪ್ರಯಾಣ 50 ಕಿ.ಮೀ ನಷ್ಟು ತಗ್ಗಲಿದ್ದು,  ಬೆಂಗಳೂರು ಮತ್ತು ಮಂಗಳೂರು ಸಂಚಾರದ ಸಮಯ ಸಹ ಕಡಿಮೆಯಾಗಲಿದೆ.

ಈ ರೈಲು ಚನ್ನರಾಯಪಟ್ಟಣ, ಬಿ.ಜಿ. ನಗರ, ಶ್ರವಣಬೆಳಗೊಳ, ಯಡಿಯೂರು, ಕುಣಿಗಲ್, ನೆಲಮಂಗಲ, ಚಿಕ್ಕಬಾಣಾವರಗಳಲ್ಲಿ ನಿಲ್ದಾಣ ಹೊಂದಿದೆ.

1997ರಲ್ಲಿ ಬೆಂಗಳೂರು ಮತ್ತು ಹಾಸನ ರೈಲು ಮಾರ್ಗ ನಿರ್ಮಾಣಕ್ಕೆ 400 ಕೊಟಿ ರೂ. ಮಂಜೂರಾಗಿತ್ತು. 20 ವರ್ಷಗಳ ಬಳಿಕ ಯೋಜನೆ ಸಂಪೋರ್ಣವಾಗಿದ್ದು, 1300 ಕೋಟಿ ಖರ್ಚಾಗಿದೆ.

 

ವೆಬ್ದುನಿಯಾವನ್ನು ಓದಿ