ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾದ ಹೆಚ್‌ಡಿಕೆ: ಸರ್ಕಾರಕ್ಕೆ ತರಾಟೆ

ಗುರುವಾರ, 21 ಮೇ 2015 (16:29 IST)
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇದ್ದಕ್ಕಿದ್ದಂತೆ ಸಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, ಮೊದಲ ದಿನವೇ ಸರ್ಕಾರಕ್ಕೆ ತೀವ್ರ ತರಾಟೆ ತೆಗೆದುಕೊಂಡಿದ್ದಾರೆ. 
 
ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿರುವ ಅವರು, ಪಿಯುಸಿ ಫಲಿತಾಂಶದಲ್ಲಿ ಗೊಂದವಿರುವ ವಿಚಾರಕ್ಕೆ ಸಂಬಂಧಿಸಿದಂತೆ ಧ್ವನಿ ಎತ್ತಿದ್ದು, ಸ್ರಕಾರ ಮಕ್ಕಳ ವಿದ್ಯಾಭ್ಯಾಸದಲ್ಲಿ ಚೆಲ್ಲಾಟವಾಡುತ್ತಿದೆ. ಅದನ್ನು ಬಿಟ್ಟು ರಾಜ್ಯದ ಸಿಕ್ಷಣ ಸಚಿವರು ವಿದ್ಯಾರ್ಥಿಗಳ ಹಾಗೂ ಪೋಷಕರ ಸಭೆ ಕರೆಯಲಿ. ಆ ಮೂಲಕ ಇರುವ ಸಮಸ್ಯೆಯನ್ನು ಬಗೆಹರಿಸಲಿ. ಅಲ್ಲದೆ ಮರುಮೌಲ್ಯ ಮಾಪನಕ್ಕಾಗಿ ಪಾವತಿಸಿಕೊಳ್ಳಲಾಗುತ್ತಿರುವ ಶುಲ್ಕದಲ್ಲಿ ವಿನಾಯಿತಿ ಘೋಷಿಸಲಿ ಎಂದು ರಾಜ್ಯದ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರನ್ನು ಪರೋಕ್ಷವಾಗಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. 
 
ಪಿಯುಸಿ ಫಲಿತಾಂಶವು ಕಳೆದ ಮೇ 18ರಂದು ಪ್ರಕಟವಾಗಿದ್ದು, ಶಿಕ್ಷಣ ಇಲಾಖೆಯೇ ಮೂರು ವೆಬ್‌ಸೈಟ್‌ಗಳನ್ನು ಬಿಡುಗಡೆಗೊಳಿಸಿತ್ತು. ಆದರೆ ಒಂದು ವೆಬ್‌ಸೈಟ್‌ನಲ್ಲಿ ಒಂದು ತೆರನಾದ ಫಲಿತಾಂಶ ಪ್ರದರ್ಶನವಾಗುತ್ತಿದ್ದರೆ ಮತ್ತೊಂದು ವೆಬ್‌ಸೈಟ್‌ನಲ್ಲಿ ಮತ್ತೊಂದು ತೆರನಾದ ಫಲಿತಾಂಶ ಪ್ರದರ್ಶನವಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಆತಂಕಕ್ಕೀಡಾಗಿದ್ದು, ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ