ಬೆಂಗಳೂರಿನಲ್ಲಿ ಅವಾಂತರ ಸೃಷ್ಟಿಸಿದ ಮಳೆ: ಧರೆಗುರುಳಿದ ಮರಗಳು

ಶನಿವಾರ, 25 ಅಕ್ಟೋಬರ್ 2014 (19:31 IST)
ಬೆಂಗಳೂರಿನಲ್ಲಿ ದೀಪಾವಳಿಗೆ 2, 3 ದಿನಗಳ  ಬಿಡುವು ಪಡೆದಿದ್ದ ಮಳೆರಾಯ ಇಂದು ಮಧ್ಯಾಹ್ನ ಮತ್ತೆ ಆರ್ಭಟಿಸಿದ್ದರಿಂದಾಗಿ  ಹಲವೆಡೆ ವಾಹನಸಂಚಾರ ಅಸ್ತವ್ಯಸ್ತವಾಗಿದೆ. ನಿರಂತರವಾಗಿ ಎರಡು ಗಂಟೆಗಳ ಕಾಲ ಸುರಿದ ಧಾರಾಕಾರ ಮಳೆ ಬೆಂಗಳೂರಿನ ಹಲವೆಡೆ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದೆ.

ತೀವ್ರ ಮಳೆಯಿಂದ ರಾಜಕಾಲುವೆ  ಗೋಡೆ ಕುಸಿದು ಜರ್ನಲಿಸ್ಟ್ ಕಾಲೋನಿಯಲ್ಲಿ  ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಜ್ಯಾಮ್ ಉಂಟಾಗಿದೆ. ಕೆ.ಆರ್. ಸರ್ಕಲ್ ಬಳಿ ಸಾರಿಗೆ ಬಸ್ಸಿನ ಚಕ್ರ ಗುಂಡಿಯಲ್ಲಿ ಸಿಲುಕಿತ್ತು.

ಚಾಮರಾಜಪೇಟೆಯಲ್ಲಿ ಮರವೊಂದು ಧರೆಗುರುಳಿದೆ. ರಸ್ತೆ ಮೇಲೆ ನದಿಯಂತೆ ನೀರು ಹರಿಯುತ್ತಿದೆ. ಜಯನಗರದ ನಾಲ್ಕನೇ ಬ್ಲಾಕ್‌ನಲ್ಲಿ ಕೂಡ ಮರಗಳು ಧರೆಗುರುಳಿವೆ.

ವೆಬ್ದುನಿಯಾವನ್ನು ಓದಿ