ಡಿವೈಎಸ್‌ಪಿ ವರ್ಗಾವಣೆ: ಪರಮೇಶ್ವರ್ ವಿವರಣೆ ಕೇಳಿದ ಹೈಕಮಾಂಡ್

ಶನಿವಾರ, 30 ಜನವರಿ 2016 (17:22 IST)
ಡಿವೈಎಸ್‌ಪಿ ಅನುಪಮಾ ಶೆಣೈ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಮೇಶ್ವರ್ ಅವರಿಂದ  ಕಾಂಗ್ರೆಸ್ ಹೈಕಮಾಂಡ್ ವಿವರಣೆ ಕೇಳಿದೆ. ಪರಮೇಶ್ವರ್ ನಾಯಕ್ ಅವರು ಅನುಪಮಾ ಶೆಣೈ ಅವರನ್ನು ವರ್ಗಾವಣೆ ಮಾಡಿಸಿದ್ದಾಗಿ ಕಾರ್ಯಕರ್ತರ ಸಭೆಯಲ್ಲಿ  ಹೇಳಿದ್ದರು. ಇದರಿಂದಾಗಿ ಕೂಡ್ಲಿಗಿಯಲ್ಲಿ ಜನರು ಬಂದ್ ಆಚರಿಸಿ ವರ್ಗಾವಣೆ ವಿರುದ್ಧ ಪ್ರತಿಭಟನೆ ನಡೆಸಿದ್ದರು.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್  ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರಿಂದ ಈ ಕುರಿತು ವಿವರಣೆ ಕೇಳಿದೆ. ಪರಮೇಶ್ವರ್ ಅವರು ಈ ಪ್ರಕರಣ ಕುರಿತು ವರದಿ ನೀಡಲಿದ್ದು, ಪಕ್ಷಕ್ಕಾಗುವ ಹಾನಿ ತಪ್ಪಿಸುವ ಸಲುವಾಗಿ ಪರಮೇಶ್ವರ್ ನಾಯ್ಕ್ ಅವರ ರಾಜೀನಾಮೆಯನ್ನು ಕೇಳುವ ಸಾಧ್ಯತೆಗಳೂ ಇವೆಯೆಂದು ಹೇಳಲಾಗುತ್ತಿದೆ.

 ಸಿಎಂ ಸಿದ್ದರಾಮಯ್ಯ ಅವರು ಅನುಪಮಾ ಶೆಣೈ ವರ್ಗಾವಣೆ ಕುರಿತ ಪತ್ರಕರ್ತರ ಪ್ರಶ್ನೆಗೆ ಆಡಳಿತಾತ್ಮಕ ವಿಚಾರ, ಇವೆಲ್ಲಾ ಕೇಳಬೇಡಿ, ಒಂದು ವರ್ಷ ಸೇವೆ ಬಳಿಕ ವರ್ಗಾವಣೆ ಮಾಡುವುದು ಮಾಮೂಲಿ ಎಂದು ಪತ್ರಕರ್ತರಿಗೆ ಹೇಳಿ ಬಾಯಿಮುಚ್ಚಿಸಿದ್ದರು. ಈ ನಡುವೆ ಪರಮೇಶ್ವರ ನಾಯ್ಕ್ ಮತ್ತಷ್ಟು ಅಧಿಕಾರಿಗಳಿಗೆ ಧಮ್ಕಿ ಹಾಕಿದ ಬಗ್ಗೆ  ವಿಡಿಯೋ ಬಯಲಾಗಿದೆ. ಪರಮೇಶ್ವರ ನಾಯಕ್ ಸುಮಾರು ಇನ್ನೂ 31 ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿದ ಆರೋಪವೂ ಅವರ ಮೇಲಿದೆ.

ವೆಬ್ದುನಿಯಾವನ್ನು ಓದಿ