15 ಡಿನೋಟಿಫಿಕೇಶನ್ ಪ್ರಕರಣ ಹೈಕೋರ್ಟ್‌ನಿಂದ ರದ್ದು: ಯಡಿಯೂರಪ್ಪ ನಿರಾಳ

ಮಂಗಳವಾರ, 5 ಜನವರಿ 2016 (15:52 IST)
ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಪ್ರಕರಣ ರದ್ದುಪಡಿಸಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ನೀಡಿದೆ. ಯಡಿಯೂರಪ್ಪ ವಿರುದ್ಧ 15 ಎಫ್‌ಐಆರ್ ದಾಖಲಿಸಲಾಗಿತ್ತು. ತಮ್ಮ ವಿರುದ್ದ ಪ್ರಕರಣಗಳು ರದ್ದಾಗಿರುವುದರಿಂದ ಯಡಿಯೂರಪ್ಪ ಈಗ ನಿರಾಳರಾಗಿದ್ದಾರೆ.  15 ಡಿನೋಟಿಫಿಕೇಶನ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಡಿಯೂರಪ್ಪ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.

ಸಿಎಜಿ ವರದಿ ಆಧರಿಸಿ ಜಯಕುಮಾರ್ ಹಿರೇಮಠ್ ದೂರು ದಾಖಲಿಸಿದ್ದರು. ಈ ದೂರು ಆಧರಿಸಿ ಸಿಐಡಿ ತನಿಖೆ ಆರಂಭಿಸಿತ್ತು. ಬಳಿಕ ಲೋಕಾಯುಕ್ತ  ಪೊಲೀಸರು 15 ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಯಡಿಯೂರಪ್ಪ 15 ತಕರಾರು ಅರ್ಜಿ ಸಲ್ಲಿಸಿ ತಮ್ಮ ವಿರುದ್ಧ ಎಫ್‌ಐಆರ್ ರದ್ದು ಮಾಡುವಂತೆ ಕೋರಿದ್ದರು.

 ಸಿಎಜಿ ವರದಿ ಆಧರಿಸಿ ಎಫ್‌ಐಆರ್ ದಾಖಲಿಸಿದ್ದು ಸರಿಯಲ್ಲ ಎಂದು ಹೈಕೋರ್ಟ್ ತೀರ್ಪಿನಲ್ಲಿ ತಿಳಿಸಿ, ಯಡಿಯೂರಪ್ಪ ವಿರುದ್ಧ ಪ್ರಕರಣಗಳನ್ನು ರದ್ದುಮಾಡಿದೆ. ಹೈಕೋರ್ಟ್ ತೀರ್ಪಿನಿಂದ ಬಿಎಸ್‌ವೈ ಎಲ್ಲಾ ಪ್ರಕರಣಗಳಿಂದ ಆರೋಪಮುಕ್ತರಾಗಿ ರಾಜಕೀಯ ದಾರಿ ಸುಗಮವಾಗಿದೆ. 
 

ವೆಬ್ದುನಿಯಾವನ್ನು ಓದಿ