ಯಳ್ಳೂರು ಘಟನೆ: ಸರ್ಕಾರದ ಕಾರ್ಯವೈಖರಿ ವಿರುದ್ಧ ಹೈಕೋರ್ಟ್ ಅಸಮಾಧಾನ

ಸೋಮವಾರ, 28 ಜುಲೈ 2014 (13:13 IST)
ಬೆಳಗಾವಿಯ ಯಳ್ಳೂರಿನಲ್ಲಿ ನಾಮಫಲಕ ವಿವಾದಕ್ಕೆ ಸಂಬಂಧಿಸಿದಂತೆ ಬೀಮಪ್ಪ ಗಡಾದ ಎಂಬವರು ಹೈಕೋರ್ಟ್‌ನಲ್ಲಿ ಸಲ್ಲಿಸಿದ ಪಿಐಎಲ್‌ಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ಸರ್ಕಾರದ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದೆ. ಯಳ್ಳೂರಿನಲ್ಲಿ ನಾಮಫಲಕ ತೆರವು ಮಾಡಿರುವುದಾಗಿ ಸರ್ಕಾರ ತಿಳಿಸಿದ ಬಳಿಕ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.

 ಈ ನಡುವೆ ವಿಧಾನಪರಿಷತ್ತಿನಲ್ಲಿ ಯಳ್ಳೂರು ಪ್ರಕರಣ ಪ್ರತಿಧ್ವನಿಸಿತು.ಪ್ರಶ್ನೋತ್ತರ ವೇಳೆ ಬದಿಗೊತ್ತಿ ಯಳ್ಳೂರು ಪ್ರಕರಣ ಚರ್ಚಿಸಿ ಎಂದು ಈಶ್ವರಪ್ಪ ಒತ್ತಾಯಿಸಿದರು. ಪ್ರಶ್ನೋತ್ತರ ವೇಳೆಯ ನಂತರ ಚರ್ಚೆಗೆ ಅವಕಾಶ ನೀಡುವುದಾಗಿ ಡಿ.ಎಚ್. ಶಂಕರಮೂರ್ತಿ ಭರವಸೆ ನೀಡಿದರು. ಯಳ್ಳೂರು ಪ್ರಕರಣದಲ್ಲಿ ಗುಪ್ತದಳ ಸಂಪೂರ್ಣ ವಿಫಲವಾಗಿದೆ ಎಂದು ಈಶ್ವರಪ್ಪ ಆರೋಪಿಸಿದರು. ಪತ್ರಕರ್ತರು, ಪೊಲೀಸರ ಮೇಲೆ ಕಲ್ಲು ತೂರಾಟವಾಗಿದೆ. ಹೈಕೋರ್ಟ್ ಆದೇಶ ಪಾಲಿಸಲು ಸರ್ಕಾರ ವಿಳಂಬಧೋರಣೆ ತೋರಿದೆ.

ಮೊದಲು ಯಳ್ಳೂರು ಪ್ರಕರಣದ ಬಗ್ಗೆ ಚರ್ಚೆಯಾಗಬೇಕು ಎಂದು ಈಶ್ವರಪ್ಪ ಒತ್ತಾಯಿಸಿದರು. ಶಾಂತಿ ನೆಲೆಸುವಂತೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಪ್ರಶ್ನೋತ್ತರ ಕಲಾಪಕ್ಕೆ ಅವಕಾಶ ನೀಡುವಂತೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು. 
 

ವೆಬ್ದುನಿಯಾವನ್ನು ಓದಿ