ರುಸ್ತು ಕೇರ್‌ವಾಲಾ ವಿರುದ್ಧ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ

ಶುಕ್ರವಾರ, 21 ನವೆಂಬರ್ 2014 (16:07 IST)
ಖಾಸಗಿ ಶಾಲೆಯಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ರುಸ್ತುಂ ಕೇರ್‌ವಾಲಾ ವಿರುದ್ಧ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ಏಕಸದಸ್ಯ ಪೀಠ ತಡೆಯಾಜ್ಞೆ ನೀಡಿದೆ.

 ಅವರ ವಿರುದ್ಧ ಸಾಕ್ಷ್ಯ ನಾಶಪಡಿಸಿದ ಆರೋಪವನ್ನು ಪೊಲೀಸರು ಹೊರಿಸಿದ್ದು, ಆರೋಪ ಪಟ್ಟಿ ದಾಖಲಿಸಿದ್ದರು. ರುಸ್ತುಂ ಕೇರ್‌ವಾಲಾ ಖಾಸಗಿ ಶಾಲೆಯ ಅಧ್ಯಕ್ಷರಾಗಿದ್ದು, ಮುಂಬೈನಲ್ಲಿ ವಾಸವಿದ್ದರು.  ಘಟನೆ ನಡೆದ ಬಳಿಕವೇ ಅವರು ಬೆಂಗಳೂರಿಗೆ ಆಗಮಿಸಿದ್ದರು.

ಹೀಗಾಗಿ ಅವರ ಮೇಲೆ ಸಾಕ್ಷ್ಯನಾಶಪಡಿಸಿದ ಆರೋಪ ಹೊರಿಸಿರುವುದು ಸರಿಯಲ್ಲ ಎಂದು ಅವರ ಪರ ವಕೀಲರು ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಮುಂದಿನ ವಿಚಾರಣೆ ಡಿ. ಮೊದಲನೇ ವಾರ ಎತ್ತಿಕೊಂಡಿದೆ. 
 

ವೆಬ್ದುನಿಯಾವನ್ನು ಓದಿ