ಎಲ್ಲೆಲ್ಲೂ ಹೋಳಿ ಸಂಭ್ರಮ, ಬಣ್ಣದ ನೀರಿನಲ್ಲಿ ಮಿಂದೆದ್ದ ಮಕ್ಕಳು

ಗುರುವಾರ, 24 ಮಾರ್ಚ್ 2016 (03:04 IST)
ರಾಜ್ಯದಲ್ಲಿ ಎಲ್ಲೆಲ್ಲೂ ಹೋಳಿ ಸಂಭ್ರಮ, ಸಡಗರದಲ್ಲಿ ಜನರು ಪರಸ್ಪರ ಬಣ್ಣಗಳನ್ನು ಎರಚಿಕೊಂಡು ಹರ್ಷಿಸಿದರು. ಬಣ್ಣದಾಟದಲ್ಲಿ ತೊಡಗಿದ ಯುವಕರು, ಬಣ್ಣದ ನೀರಿನಲ್ಲಿ ಮಿಂದೆದ್ದ ಮಕ್ಕಳು. ಗಡಿನಾಡು ಬಳ್ಳಾರಿಯಲ್ಲಿ ಹೋಳಿಸಂಭ್ರಮದ ಜೋರಾಗಿತ್ತು.

ನಗರದ ಗಾಂಧಿನಗರದಲ್ಲಿ ಬಣ್ಣದ ನೀರು ಪರಸ್ಪರ ಎರಚಿಕೊಂಡು ಮಡಕೆ ಒಡೆಯುವ ಮೂಲಕ ಹೋಳಿ ಆಚರಿಸಿದರು. ವಿಜಯಪುರದಲ್ಲಿ ಪುಟಾಣಿಗಳು ಹೋಳಿಹಬ್ಬದ ಸಂಭ್ರಮದಲ್ಲಿ ತೊಡಗಿದ್ದರು. ಹಲಗೆಗಳನ್ನು ಬಾರಿಸುತ್ತಾ ಹೋಳಿ ಹಬ್ಬಕ್ಕೆ ಮೆರುಗು ತಂದರು.

ಹಾವೇರಿಯಲ್ಲಿ ಹಬ್ಬದ ಸಡಗರದಲ್ಲಿ ಪಾಲ್ಗೊಂಡ ಚಿನ್ನರು ಆಸ್ಪತ್ರೆ ಸೇರಿದ್ದಾರೆ. ಪರಸ್ಪರ ಬಣ್ಣ ಎರಚಿಕೊಂಡಿದ್ದಾಗ ರಾಸಾಯನಿಕಗಳು ಚಿಮ್ಮಿ ಕೆಲವು ಮಕ್ಕಳು ಅಸ್ವಸ್ಥರಾದಾಗ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಯಿತು. 

ವೆಬ್ದುನಿಯಾವನ್ನು ಓದಿ