ನಿವೇಶನ ಕಬಳಿಕೆ ಆರೋಪ: ಬಿಬಿಎಂಪಿ ಮಾಜಿ ಮೇಯರ್ ವಿರುದ್ಧ ಎಫ್ಐಆರ್

ಮಂಗಳವಾರ, 7 ಜುಲೈ 2015 (14:31 IST)
ನಕಲಿ ದಾಖಲೆ ಸೃಷ್ಟಿಸಿ ಬಿಡಿಎ ನಿವೇಶನವನ್ನು ಕಬಳಿಸಿರುವ ಆರೋಪ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಡಿ.ವೆಂಕಟೇಶ್ ಮೂರ್ತಿ ಅವರ ವಿರುದ್ಧ ನಗರದ ಬಿಎಂಟಿಎಫ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.  
 
ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾರ್ವಜನಿಕ ಉದ್ದೇಶಗಳಿಗೆ ಮೀಸಲಿರಿಸಲಾಗಿದ್ದ ಸೈಟನ್ನು ಕಬಳಿಸಲಾಗಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಡಿ.ವೆಂಕಟೇಶ್ ಮೂರ್ತಿ ಹಾಗೂ ಅವರ ಪತ್ನಿ ಕೆ.ಪ್ರಭಾ ಅವರೂ ಸೇರಿದಂತೆ ಬಿಬಿಎಂಪಿಯ ಇತರೆ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. 
 
ಏನಿದು ಪ್ರಕರಣ?: 
ಪದ್ಮನಾಭನಗರದ ಏಳನೇ ಕ್ರಾಸ್‌ನಲ್ಲಿರುವ 12 ಸಾವಿರ ಚದರ ಅಡಿಯ ನಿವೇಶನ ಇದಾಗಿದ್ದು, ಇದನ್ನು ಸಾರ್ವಜನಿಕ ಉದ್ದೇಶಗಳಿಗಾಗಿ ಮೀಸಲಿರಿಸಲಾಗಿತ್ತು. ಆದರೆ ವೆಂಕಟೇಶ್ ಮೂರ್ತಿ ಅವರು ಮೇಯರ್ ಆಗಿದ್ದ ವೇಳೆಯಲ್ಲಿ ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿ ಆ ಸೈಟನ್ನು ಕಬಳಿಸಿದ್ದಾರೆ ಎಂದು ಮೂರ್ತಿ ವಿರುದ್ಧ ಮುನಿಕೃಷ್ಣ ಎಂಬುವವರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. 
 
ಈ ಹಿನ್ನೆಲೆಯಲ್ಲಿ ಮೇಯರ್ ವೆಂಕಟೇಶ್ ಮೂರ್ತಿ ಹಾಗೂ ಅವರ ಪತ್ನಿ ಕೆ.ಪ್ರಭಾ ಸೇರಿದಂತೆ ಬಿಬಿಎಂಪಿಯ ಇತರೆ ಅಧಿಕಾರಿಗಳ ವಿರುದ್ಧ ಬಿಎಂಟಿಎಸ್ ಅಧಿಕಾರಿಗಳು ದೂರು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ