ಬಿಜೆಪಿ ಬೆಂಗಳೂರನ್ನು ಮತ್ತೆ ಗಾರ್ಬೇಜ್ ಸಿಟಿ ಮಾಡದಿರಲಿ: ಜಾರ್ಜ್

ಬುಧವಾರ, 26 ಆಗಸ್ಟ್ 2015 (14:24 IST)
ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಪಕ್ಷ 100 ಸ್ಥಾನಗಳಿಸಿ ಅಧಿಕಾರದ ಗದ್ದುಗೆಯತ್ತ ದಾಪುಗಾಲು ಹಾಕಿದೆ. ಆದರೆ, ಬೆಂಗಳೂರನ್ನು ಮತ್ತೆ ಗಾರ್ಬೇಜ್ ಸಿಟಿಯಾಗಿ ಮಾಡದಿರಲಿ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಸಲಹೆ ನೀಡಿದ್ದಾರೆ.
 
ಯಾವುದೇ ಚುನಾವಣೆಯಲ್ಲಿ ಗೆದ್ದಾಗ ಎಲ್ಲರು ಯಜಮಾನರಾಗುತ್ತಾರೆ. ಆದರೆ, ಸೋತಾಗ ಯಾರು ಬರೋಲ್ಲ. ಮುಂದಿನ ಐದು ವರ್ಷಗಳವರೆಗೆ ಜನಪರ ಕೆಲಸಗಳನ್ನು ಮಾಡಿ ಜನಮೆಚ್ಚುಗೆ ಪಡೆಯಿರಿ ಎಂದರು.
 
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ನಗರದ ಅಭಿವೃದ್ಧಿಗಾಗಿ ಯಾವುದೇ ನೆರವು ನೀಡಲು ಸಿದ್ದವಾಗಿದೆ. ನೆರವು ಸದುಪಯೋಗಪಡಿಸಿಕೊಂಡು ನಗರವನ್ನು ಮಾದರಿ ನಗರವನ್ನಾಗಿಸಿ ಎಂದು ಬಿಜೆಪಿ ಮುಖಂಡರಿಗೆ ಕಿವಿಮಾತು ಹೇಳಿದರು.
 
ಬಿಬಿಎಂಪಿ ಚುನಾವಣೆಯನ್ನು ಕಾಂಗ್ರೆಸ್ ಪಕ್ಷದ ನಾಯಕರು ಸಾಮೂಹಿಕವಾಗಿ ಎದುರಿಸಿದ್ದರಿಂದ ಸೋಲನ ಹೊಣೆಯನ್ನುಕೂಡಾ ಸಾಮೂಹಿಕವಾಗಿ ಹೊರುತ್ತೇವೆ. ಸೋಲಿನಿಂದ ಪಾಠ ಕಲಿತಿದ್ದೇವೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ