ಭೀಕರ ಕಾರ್ ಅಪಘಾತಕ್ಕೆ ಮೂವರು ಯುವಕರು ಬಲಿ

ಭಾನುವಾರ, 16 ಅಕ್ಟೋಬರ್ 2016 (09:20 IST)
ರಸ್ತೆ  ಬದಿಯ ತಡೆಗೋಡೆಗೆ ಕಾರ್ ಡಿಕ್ಕಿ ಹೊಡೆದು ಮೂವರು ದುರ್ಮರಣವನ್ನಪ್ಪಿದ ಘಟನೆ ಸೋಮವಾರಪೇಟೆ ತಾಲ್ಲೂಕಿನ ಬಸವನಹಳ್ಳಿಯಲ್ಲಿ ನಡೆದಿದೆ. 

ಮಡಿಕೇರಿ ಮಾರ್ಗದಿಂದ ಆಗಮಿಸುತ್ತಿದ್ದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಗೆ ಹೊಡೆದ ಕಾರ್ ಚೂರುಚೂರಾಗಿದೆ. ಅಪಘಾತದ ಭೀಕರತೆಗೆ ಮೈಸೂರಿನ ಕೆ ಜಿ ಕೊಪ್ಪಲಿನ ನಿವಾಸಿಗಳಾದ ಚಂದ್ರು(19) ನಂದೀಶ್(18) ಚೇತನ್(19) ದುರ್ಮರಣವನ್ನಪ್ಪಿದ್ದಾರೆ. 
 
ಘಟನೆಯಲ್ಲಿ ಮತ್ತೆ ಮೂವರಿಗೆ ಗಂಭೀರ ಗಾಯಗಳಾಗಿದ್ದು (ಸುಹಾಸ್, ಪ್ರತಾಪ್, ಶಿವಕುಮಾರ್) ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 
 
ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ