ನಾಯಿ ಉಳಿಸಲು ಹೋಗಿ ಸಹೋದರರ ಸಾವು

ಸೋಮವಾರ, 29 ಫೆಬ್ರವರಿ 2016 (09:13 IST)
ನಾಯಿಯ ಪ್ರಾಣ ಉಳಿಸಲು ಹೋಗಿ ಸಹೋದರರಿಬ್ಬರು ಮೃತ ಪಟ್ಟು, ಮತ್ತೊಬ್ಬ ಸಹೋದರ ಸೇರಿದಂತೆ ಮೂವರು ಗಾಯಗೊಂಡ ಘಟನೆ ಹೊಸೂರು ರಸ್ತೆ ಸಿ೦ಗಸ೦ದ್ರದ ಬಳಿ ನಡೆದಿದೆ. ಮೃತರು ಟಿಪ್ಪರ್‌ನಲ್ಲಿ ಪ್ರಯಾಣಿಸುತ್ತಿದ್ದರು. 
 
ಮೃತರನ್ನು ಹೊಸೂರು ನಿವಾಸಿಗಳಾಗಿ  ಶ್ರೀನಿವಾಸ್ (30) ಮತ್ತು ರಾಜೇ೦ದ್ರ (28) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಸಹೋದರ ಶ೦ಕರ್(18) ಚಾಲಕ ರಾಜಪ್ಪ ಹಾಗೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸುಧಾಮಣಿ ಎಂಬುವವರು ಘಟನೆಯಲ್ಲಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. 
 
ಶನಿವಾರ ರಾತ್ರಿ ಈ ಘಟನೆ ನಡೆದಿದ್ದು ಮೂವರು ಸಹೋದರರು ಜಲ್ಲಿಕಲ್ಲು ತುಂಬಿದ್ದ ಟಿಪ್ಪರ್ ಲಾರಿಯನ್ನು ಕೋರಮ೦ಗಲದಲ್ಲಿ ಅನ್‍ಲೋಡ್ ರಾತ್ರಿ 11.40ರ ಸುಮಾರಿಗೆ ಹೊಸೂರಿಗೆ ಮರಳುತ್ತಿದ್ದರು. ಹೊಸೂರು ರಸ್ತೆ ಸಿ೦ಗಸ೦ದ್ರದ ಸಮೀಪ ವೇಗವಾಗಿ ಚಲಿಸುತ್ತಿದ್ದ ಟಿಪ್ಪರ್‍‌ಗೆ ನಾಯಿ ಅಡ್ಡ ಬ೦ದಿದೆ. ಚಾಲಕ ರಾಜಪ್ಪ ಅದನ್ನು ರಕ್ಷಿಸಲೆಂದು ಬ್ರೇಕ್ ಹಾಕಿ ಬಲಕ್ಕೆ ತಿರುಗಿಸಿದಾಗ   ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಟಿಪ್ಪರ್ ಪಕ್ಕದ ರಸ್ತೆಯಲ್ಲಿ ಟಿಪ್ಪರ್ ಪಲ್ಟಿ ಹೊಡೆದೆ ಎದುರಿನಿಂದ ಬರುತ್ತಿದ್ದ ಕಾರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಟಿಪ್ಪರ್ ಅಡಿಯಲ್ಲಿ ಸಿಕ್ಕಿದ್ದ ಸಹೋದರರು ಸ್ಥಳದಲ್ಲೇ ಅಸುನೀಗಿದ್ದಾರೆ. ಟಿಪ್ಪರ್‌ ಚಾಲಕ ಮತ್ತು ಕಿರಿಯ ಸಹೋದರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸುಧಾಮಣಿ ಎಂಬುವವರಿಗೆ ಸಹ ಗಾಯವಾಗಿದೆ. ಅಪಘಾತದಲ್ಲಿ ನಾಯಿ ಸಹ ಮೃತ ಪಟ್ಟಿದೆ. 
 
ಎಲೆಕ್ಟ್ರಾನಿಕ್ ಸಿಟಿ ಸ೦ಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ