ಬಿಸಿ ನೀರಿನಲ್ಲಿ ಕೂರಿಸಿ ರೋಗಿಯ ಪ್ರಷ್ಠ ಸುಟ್ಟ ಆಸ್ಪತ್ರೆ ಸಿಬ್ಬಂದಿ

ಮಂಗಳವಾರ, 28 ಅಕ್ಟೋಬರ್ 2014 (14:40 IST)
ಪೈಲ್ಸ್ ಚಿಕಿತ್ಸೆಗಾಗಿ ಶಂಕರಪುರಂನ ರಂಗಾ ದೊರೈ ಆಸ್ಪತ್ರೆಗೆ ದಾಖಲಾಗಿದ್ದ ರಾಜೇಂದ್ರ ಪ್ರಸಾದ್ ಎಂಬ ರೋಗಿಯನ್ನು ನರ್ಸ್‌ಗಳು ಬಿಸಿನೀರಿನಲ್ಲಿ ಕೂರಿಸಿದ್ದರಿಂದ ತೀವ್ರ ಸುಟ್ಟಗಾಯದಿಂದ ಅವರು ಬಳಲುತ್ತಿದ್ದಾರೆಂದು ಆರೋಪಿಸಲಾಗಿದೆ. 48 ದಿನವಾದರೂ ಆ ಗಾಯವಾಸಿಯಾಗದಿದ್ದರಿಂದ ಆಸ್ಪತ್ರೆ ಸಿಬ್ಬಂದಿ ಅಮಾನುಷವಾಗಿ ಹೊರದಬ್ಬಿದ್ದಾರೆಂದು ದೂರಿದ್ದಾರೆ. 

ಆಪರೇಷನ್ ಮುಗಿದ ಬಳಿಕ ಉಗುರು ಬೆಚ್ಚಗಿನ ಬಿಸಿ ನೀರಿನಲ್ಲಿ ಶಾಖ ಕೊಡಬೇಕಾಗಿದ್ದ ಆಸ್ಪತ್ರೆ ಸಿಬ್ಬಂದಿ ಅದರ ಬದಲಿಗೆ ಕುದಿಯುತ್ತಿದ್ದ ನೀರಿನಲ್ಲಿ ರೋಗಿಯನ್ನು ಕೂರಿಸಿದ್ದ ರೋಗಿಯ ಪ್ರಷ್ಠ ಮತ್ತು ಆಸನದ ಭಾಗ ಸುಟ್ಟುಹೋಗಿದೆ. 48 ದಿನವಾದ್ರೂ ಗಾಯ ವಾಸಿಯಾಗದಿದ್ದರಿಂದ ರೋಗಿಯನ್ನು ಆಸ್ಪತ್ರೆಯಿಂದ ಅಮಾನವೀಯವಾಗಿ ಹೊರದಬ್ಬಿದ್ದಾರೆಂದು ರೋಗಿಯ ಸಂಬಂಧಿಕರು ದೂರಿದ್ದಾರೆ.

ಶಂಕರಪುರಂ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಈ ಕುರಿತು ರಂಗಾದೊರೈ ಆಸ್ಪತ್ರೆಯ ವೈದ್ಯ ಡಾ. ರಾಜಕುಮಾರ್ ಹೇಳಿಕೆ ನೀಡುತ್ತಾ, ರಾಜೇಂದ್ರ ಪ್ರಸಾದ್ ಅವರ ಗಾಯಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿದ್ದೇವೆ. ಆದರೆ ರೋಗಿ ಕಡೆಯವರು 20 ಲಕ್ಷ ರೂ. ಬೇಡಿಕೆ ಇಟ್ಟಿದ್ದಾರೆ. ಡಿಸ್ಚಾರ್ಜ್ ಆಗಲೂ ಒಪ್ಪುತ್ತಿಲ್ಲ. ರೋಗಿ ಕಡೆಯವರು ಪ್ರಾಣ ಕಳೆದುಕೊಳ್ಳುವ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ