ಮನೆ ಕುಸಿದು ಒಂದೇ ಕುಟುಂಬದ ನಾಲ್ವರು ಜೀವಂತ ಸಮಾಧಿ

ಶುಕ್ರವಾರ, 28 ನವೆಂಬರ್ 2014 (09:21 IST)
ಶಿಥಿಲಗೊಂಡಿದ್ದ ಮನೆಯೊಂದು ಕುಸಿದು ಬಿದ್ದು ಒಂದೇ ಕುಟುಂಬದ ನಾಲ್ವರು ದುರ್ಮರಣವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಅವರಲ್ಲಿ ಇಬ್ಬರು ಮಕ್ಕಳು ಕೂಡ ಸೇರಿದ್ದಾರೆ. 

ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಕರಕಿ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಟುಂಬ ಪೂರ್ತಿ ಜೀವಂತ ಸಮಾಧಿಯಾಗಿದ್ದು ಸಂಬಂಧಿಕರ ಆಂಕ್ರದನ ಮುಗಿಲು ಮುಟ್ಟಿದೆ. ದುರಂತದಿಂದ ಆಘಾತಗೊಂಡಿರುವ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ.
 
ಮತಪಟ್ಟವರನ್ನು ಕರಿಯಪ್ಪ (40) ಪತ್ನಿ ನೀಲಮ್ಮ(25)  ಮಲ್ಲಪ್ಪ (6) ಅಶೋಕ್ (9) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು  ಪರಿಶೀಲನೆ ನಡೆಸುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ