ಸಿಬಿಐ ಮೇಲೆ ಬಿಜೆಪಿಗೆ ಇದ್ದಕ್ಕಿದ್ದಂತೆ ವ್ಯಾಮೋಹ ಹೇಗೆ ಬಂತು: ಸಿಎಂ ಪ್ರಶ್ನೆ

ಸೋಮವಾರ, 28 ಜುಲೈ 2014 (13:39 IST)
ಅರ್ಕಾವತಿ ಬಡಾವಣೆ ಡಿನೋಟಿಫಿಕೇಶನ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ  ವಹಿಸಲು ರಾಜ್ಯಸರ್ಕಾರ ತೀರ್ಮಾನಿಸಿದೆ. ಹೈಕೋರ್ಟ್ ನಿವೃತ್ತನ್ಯಾಯಮೂರ್ತಿಯಿಂದ ತನಿಖೆ ನಡೆಸುವುದಾಗಿ ಸಿಎಂ ಇಂದು ವಿಧಾನಸಭೆಯಲ್ಲಿ ಘೋಷಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಸಿಬಿಐ ತನಿಖೆಗೆ ಒತ್ತಾಯಿಸುವುದರ ಕಾರಣವನ್ನು ಸಿಎಂ ಸಿದ್ದರಾಮಯ್ಯ ಬಿಡಿಸಿಟ್ಟರು.  ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿರುವುದರಿಂದ ಸಿಬಿಐ ತನಿಖೆಗೆ ಬಿಜೆಪಿ ಒತ್ತಾಯಿಸುತ್ತಿದೆ.

 ಸಿಬಿಐ ಕಾಂಗ್ರೆಸ್ ಬ್ಯೂರೋ ಆಫ್ ಇನ್‌ವೆಸ್ಟಿಗೇಷನ್ ಅನ್ನುತ್ತಿದ್ದರು. ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತವಿದ್ದಾಗ ಸಿಬಿಐ ತನಿಖೆಗೆ ಯಾವುದೇ ಪ್ರಕರಣವನ್ನು ವಹಿಸಬೇಕೆಂದು ಹೇಳಿದಾಗಲೆಲ್ಲಾ ಬಿಜೆಪಿ  ವಿರೋಧಿಸುತ್ತಾ ಬಂದಿತ್ತು. ಸಿಬಿಐ ವಿರುದ್ಧ ಲೇವಡಿ ಮಾಡುತ್ತಿದ್ದರು.

ಈಗ ಸಿಬಿಐ ಮೇಲೆ ಬಿಜೆಪಿಗೆ ಇದ್ದಕ್ಕಿದ್ದಂತೆ  ವ್ಯಾಮೋಹ ಬಂದಿದೆ. ಕರ್ನಾಟಕದಲ್ಲಿ ಬಿಜೆಪಿ ಆಡಳಿತದ ಐದು ವರ್ಷದಲ್ಲಿ ಸಿಬಿಐ ಯಾವುದೇ ಪ್ರಕರಣ ಕೈಗೆತ್ತಿಕೊಂಡಿಲ್ಲ.  ರಾಜ್ಯದಲ್ಲೇ ಹಲವು ತನಿಖಾ ಸಂಸ್ಥೆಗಳಿವೆ. ನಾವ್ಯಾಕೆ ಸಿಬಿಐ ತನಿಖೆಗೆ ವಹಿಸಬೇಕು ಎಂದು ಸಿಎಂ ಪ್ರಶ್ನಿಸಿದರು. 
 

ವೆಬ್ದುನಿಯಾವನ್ನು ಓದಿ