ರೈಲು ನಿಲ್ದಾಣದ ಕಟ್ಟಡ ದುರಂತ : ಮೃತರ ಸಂಖ್ಯೆ 7ಕ್ಕೆ ಏರಿಕೆ

ಮಂಗಳವಾರ, 9 ಫೆಬ್ರವರಿ 2016 (08:44 IST)
ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಸಾಮಗ್ರಿ ಸಂಗ್ರಹಿಸುವ ಕಟ್ಟಡ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 7 ಏರಿಕೆಯಾಗಿದೆ. 


ನಿನ್ನೆ ಮಧ್ಯಾಹ್ನ 2.10ರ ಸುಮಾರಿಗೆ ಕಟ್ಟಡ ಕುಸಿದಿದ್ದು ಘಟನೆಯಲ್ಲಿ ಇಲ್ಲಿಯವರೆಗೆ 7 ಮಂದಿ ಮೃತರಾಗಿದ್ದಾರೆ.  15ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯ ಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 
 
ನಿನ್ನೆ ಹುಬ್ಬಳ್ಳಿ ಕೇಶ್ವಾಪುರದ ನಿವಾಸಿ ಕೈಲಾಶ್ ರಾಜಾನಿ(70), ಸಂಡೂರಿನ ಗಾಳೆಪ್ಪ ಎಂ, ರೈಲ್ವೆ ಸಿಬ್ಬಂದಿ ತಿಮ್ಮಾರೆಡ್ಡಿ, ರೈಲ್ವೆ ಗುತ್ತಿಗೆ ನೌಕರ ಸಲೀಂ ರಫೀಕ್ ಈಟಿ, ಡಿಎಸ್‌ಪಿ ಕಚೇರಿಯ ಎಫ್‌ಡಿಸಿ ದಾಕ್ಷಾಯಿಣಿ, ಸಿದ್ಧಯ್ಯ ಹಿರೇಮಠ ಎಂಬುವವರು ಮೃತರಾಗಿದ್ದರು.  ತಡರಾತ್ರಿ  ಇನ್ನೋರ್ವ ಪೊಲೀಸ್ ಪೇದೆ ಎಸ್. ಎಸ್. ದೀಕ್ಷಿತ ಶವ ಅವಶೇಷಗಳಡಿ ಪತ್ತೆಯಾಗಿದೆ.
 
ಪಾರ್ಸೆಲ್ ತೆಗೆದುಕೊಂಡು ಹೋಗಲು ಬಂದಿದ್ದ ತಾಯಿ- ಮಗು ಕಟ್ಟಡಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಆದರೆ ಅವಶೇಷಗಳಡಿ ಸಿಲುಕಿದ್ದಾರೆನ್ನಲಾಗುತ್ತಿರುವ ತಾಯಿ- ಮಗು ಯಾರೆಂಬುದು ಪತ್ತೆಯಾಗಿಲ್ಲ. 
 
ರೈಲ್ವೆ ಸಚಿವ ಸಚಿವ ಸುರೇಶಪ್ರಭು ಮೃತರ ಕುಟುಂಬಕ್ಕೆ ತಲಾ ಎರಡು ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಿದ್ದಾರೆ.
 
ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. 
 

ವೆಬ್ದುನಿಯಾವನ್ನು ಓದಿ