ಐಐಟಿ ಸ್ಥಾಪನೆಗೆ ಕೇಂದ್ರ ಸಚಿವಾಲಯದ ಅಧಿಕಾರಿಗಳ ಪರಿಶೀಲನೆ

ಗುರುವಾರ, 27 ಆಗಸ್ಟ್ 2015 (16:36 IST)
ರಾಜ್ಯದಲ್ಲಿ ಐಟಿಐ ಸ್ಥಾಪಿಸಿಬೇಕು ಎನ್ನುವ ಬಹುದಿನಗಳ ಕನಸು ಇದೀಗ ಈಡೇರುವ ಲಕ್ಷಣಗಳು ಕಂಡುಬರುತ್ತಿವೆ. ಮೈಸೂರಿನಲ್ಲಿ ಐಐಟಿ ಸ್ಥಾಪನೆಗೆ ಕೇಂದ್ರದ ಅಧಿಕಾರಿಗಳು ಗ್ರೀನ್ ಸಿಗ್ನಲ್ ನೀಡಿದ್ದಾರೆ.
 
ರಾಜ್ಯದ ಮೂರು ಜಿಲ್ಲೆಗಳಲ್ಲಿ ಐಐಟಿ ಸ್ಥಾಪನೆ ಮಾಡಬೇಕು ಎನ್ನುವ ಒತ್ತಡದ ಮಧ್ಯೆಯೂ ಮೈಸೂರಿನಲ್ಲಿ ಸ್ಥಾಪಿಸುವುದು ಖಚಿತವಾಗಿದ್ದರಿಂದ ಸೂಕ್ತ ಸ್ಥಳಕ್ಕಾಗಿ ಹುಡುಕಾಟ ನಡೆದಿದೆ ಎನ್ನಲಾಗಿದೆ. 
 
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸುಬ್ರಹ್ಮಣ್ಯ, ಮುಂಬೈ ಐಐಟಿ ನಿರ್ದೇಶಕ ಪ್ರೊ.ದೇವಾಂಗ್, ಗಾಂಧಿನಗರ ಐಐಟಿ ನಿರ್ದೇಶಕ ಪ್ರೊ.ಸುಧೀರ್ ಎಲ್.ಜೈನ್, ಬೆಂಗಳೂರು ಸೆಂಟ್ರಲ್ ಪಬ್ಲಿಕ್ ವರ್ಕ್ ಇಂಜಿನಿಯರ್ ರವಿಕಾಂತ್ ಐಐಟಿ ಸ್ಥಾಪನೆಗೆ ಸ್ಥಳ ಪರಿಶೀಲನೆ ನಡೆಸಲು ನಗರಕ್ಕೆ ಆಗಮಿಸಿದ್ದಾರೆ
 
ಜಿಲ್ಲೆಯ ತಾಂಡವಪುರ, ಹಿಮ್ಮಮಾವು, ಹುಳಿಮಾವು ಗ್ರಾಮಗಳಲ್ಲಿ ಸುಮಾರು 500 ಎಕರೆ ಜಾಗವನ್ನು ಐಐಟಿ ಸ್ಥಾಪನೆಗೆ ಗುರುತಿಸಲಾಗಿದೆ. ಅಧಿಕಾರಿಗಳು ಈ ಜಾಗಗಳನ್ನು ಪರಿಶೀಲಿಸಿ ತಮಗೆ ಸೂಕ್ತವಾದ ಜಾಗವನ್ನು ಗುರುತಿಸಿ ವರದಿ ನೀಡಲಿದ್ದಾರೆ ಎನ್ನಲಾಗಿದೆ.
 

ವೆಬ್ದುನಿಯಾವನ್ನು ಓದಿ