ರಾಜ್ಯಸಭೆ ಚುನಾವಣೆಗೂ ರೆಸಾರ್ಟ್ ರಾಜಕಾರಣ ಕಾಲಿಟ್ಟಿದ್ದು, 14 ಮಂದಿ ಪಕ್ಷೇತರ ಶಾಸಕರು ಮುಂಬೈಗೆ ತೆರಳಿದ್ದಾರೆ ಎಂಬ ವದಂತಿ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ಬಿ.ಆರ್.ಪಾಟೀಲ್, ನಾನು ಎಲ್ಲಿಗೂ ಓಡಿ ಹೋಗಿಲ್ಲ. ಇಲ್ಲೇ ಇದ್ದೇನೆ. ನಾವು ರೆಸಾರ್ಟ್ ರಾಜಕಾರಣಕ್ಕಾಗಿ ಮುಂಬೈಗೆ ತೆರಳಿದ್ದೇನೆ ಎಂಬುದು ಸುಳ್ಳು ಸುದ್ದಿ ಎಂದು ಸ್ವಷ್ಟಪಡಿಸಿದ್ದಾರೆ.
ನಾನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ನಾನು ಜನತಾ ಪರಿವಾರದಿಂದ ಬೆಳೆದು ಬಂದಿದ್ದೇವೆ. ಮುಖ್ಯಮಂತ್ರಿಯವರು ಶೋಕಿ ಮಾಡುವಂತಹ ವ್ಯಕ್ತಿಯಲ್ಲ. ಅವರು ನೇರ ನುಡಿ ಸ್ವಭಾವದವರು. ಸಮಾಜದ ವ್ಯವಸ್ಥೆಯನ್ನು ಬದಲಾಯಿಸಲು ನಾವು ರಾಜಕೀಯಕ್ಕೆ ಬಂದಿದ್ದೇವೆ. ಆದರೆ, ಇಂದಿನ ವ್ಯವಸ್ಥೆ ತಲೆ ಕೆಳಗಾಗಿದ್ದು ಏನು ತೋಚದಂತಾಗಿದೆ ಎಂದು ಬಿ.ಆರ್.ಪಾಟೀಲ್ ಹೇಳಿದ್ದಾರೆ.