ನನಗೆ 10ಕೋಟಿ ಲಂಚ ಆಮಿಷ ಬಂದಿತ್ತು: ಕೇಜ್ರಿವಾಲ್ ವಿರುದ್ಧ ಗಾರ್ಗ್ ಆರೋಪ

ಮಂಗಳವಾರ, 31 ಮಾರ್ಚ್ 2015 (11:01 IST)
ದೆಹಲಿ ಮುಖ್ಯಮಂತ್ರಿ, ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಅವರು ರಾಜೀನಾಮೆ ನೀಡಿದ್ದ ವೇಳೆ ನನಗೆ ನಕಲಿ ದೂರವಾಣಿ ಕರೆಗಳು ಬಂದಿದ್ದವು. ಅವುಗಳನ್ನು ಮಾಡಿಸಿದ್ದುದು ಕೇಜ್ರಿವಾಲ್ ಅವರೇ ಎಂದು ಎಎಪಿಯ ಮಾಡಿ ಶಾಸಕ ರಾಜೇಶ್ ಗಾರ್ಗ್ ಅವರು ಕೇಜ್ರಿವಾಲ್ ಅವರನ್ನು ದೂರಿದ್ದಾರೆ.  
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಜ್ರಿವಾಲ್ ಅವರು ಈ ಹಿಂದೆ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ರಾಜೀನಾಮೆ ನೀಡಿದ್ದರು. ಆದರೆ ಆ ಬಳಿಕವೂ ಕೆಲ ಬೆಂಬಲಿಗರಿಂದ ನನಗೆ ಹಾಗೂ ನನ್ನ ಸಹೋದ್ಯೋಗಿ ಮಿತ್ರರಿಗೆ ದೂರವಾಣಿ ಕರೆ ಮಾಡಿಸಿದ್ದರು. ಆ ವೇಳೆ ಬಿಜೆಪಿಯನ್ನು ಬೆಂಬಲಿಸಿ ಮತ್ತೊಮ್ಮೆ ಸರ್ಕಾರ ರಚಿಸಲು ಬೆಂಬಲಿಸಿ ಎಂದು ಸೂಚಿಸಿದ್ದರು ಎಂದು ಆರೋಪಿಸಿದರು. 
 
ಇದೇ ವೇಳೆ, ಕರೆ ಮಾಡಿದ್ದವರು ಬಿಜೆಪಿ ನಾಯಕರಾದ ನಿತಿನ್ ಗಡ್ಕರಿ ಹಾಗೂ ರಾಜನಾಥ್ ಸಿಂಗ್ ಅವರ ಹೆಸರನ್ನು ಹೇಳುತ್ತಿದ್ದರು. ಅಲ್ಲದೆ ಬಂಬಲಿಸಿದಲ್ಲಿ 10 ಕೋಟಿ ಲಂಚದ ಆಮಿಷವನ್ನೂವೊಡ್ಡಿದ್ದರು ಎಂದು ಆರೋಪಿಸಿರುವ ಅವರು, ಆ ನಕಲಿ ಕರೆಗಳನ್ನು ಮಾಡಿಸಿರುವುದು ಪ್ರಸ್ತುತ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಿರುವ ಅರವಿಂದ್ ಕೇಜ್ರಿವಾಲ್ ಅವರೇ ಎಂದು ಆರೋಪಿಸಿದರು. 
 
ಗಾರ್ಗ್ ಇಂತಹ ಆರೋಪಗಳನ್ನು ಈ ಹಿಂದೆಯೂ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈ ಹಿಂದೆಯೇ ಇವರನ್ನು ಎಎಪಿ ಪಕ್ಷದ ಸದಸ್ಯತ್ವದಿಂದ ಉಚ್ಛಾಟಿಸಲಾಗಿತ್ತು. 

ವೆಬ್ದುನಿಯಾವನ್ನು ಓದಿ