ಡಿಸಿಎಂ ಹುದ್ದೆ ಸೃಷ್ಟಿಯಾದ್ರೆ ನಾನೂ ಅರ್ಜಿ ಹಾಕ್ತೇನೆ: ಜಯಚಂದ್ರ

ಸೋಮವಾರ, 1 ಸೆಪ್ಟಂಬರ್ 2014 (18:06 IST)
ಡಿಸಿಎಂ ಹುದ್ದೆ ಸಂವಿಧಾನಾತ್ಮಕವಾಗಿ ಸೃಷ್ಟಿಯಾಗುವುದಿಲ್ಲ. ರಾಜಕೀಯ ಕಾರಣಗಳಿಗಾಗಿ ಡಿಸಿಎಂ ಹುದ್ದೆಯನ್ನು ಸೃಷ್ಟಿಸಲಾಗುತ್ತದೆ. ಡಿಸಿಎಂ ಹುದ್ದೆ ಪಕ್ಷದಲ್ಲಿ ಸೃಷ್ಟಿಯಾದ್ರೆ ನಾನೂ ಕೂಡ ಅರ್ಜಿ ಹಾಕುವೆ ಎಂದು ಕಾನೂನು ಸಚಿವ ಜಯಚಂದ್ರ ಹೇಳಿದ್ದು, ಇದರಿಂದಾಗಿ ಡಿಸಿಎಂ ಹುದ್ದೆಗೆ ತೀವ್ರ ಪೈಪೋಟಿ ಉಂಟಾಗಿದೆ. ಈಗಾಗಲೇ ಡಿಸಿಎಂ ಹುದ್ದೆಯನ್ನು ಪರಮೇಶ್ವರ್ ಅವರಿಗೆ ನೀಡಬೇಕೆಂದು ಪರಮೇಶ್ವರ್ ಬೆಂಬಲಿಗರು ಓಕ್ಕೋರಲಿನಿಂದ ಒತ್ತಾಯಿಸಿದ್ದಾರೆ.

ಆದರೆ ಸಿಎಂ ಸಿದ್ದರಾಮಯ್ಯ ಡಿಸಿಎಂ ಹುದ್ದೆ ಸೃಷ್ಟಿಗೆ ಸುತಾರಾಂ ಒಪ್ಪುತ್ತಿಲ್ಲ. ಸಚಿವ ಸಂಪುಟ ವಿಸ್ತರಣೆ ಮತ್ತು ನಿಗಮ, ಮಂಡಳಿಗೆ ನೇಮಕ ಮಾಡಲು ಸಿಎಂ ನಿರ್ಧರಿಸಿದ್ದಾರೆಯೇ ಹೊರತು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯ ಬಗ್ಗೆ ಚಕಾರ ಎತ್ತಿಲ್ಲ.

ಆದರೆ ಪರಮೇಶ್ವರ್ ಅವರು ಡಿಸಿಎಂ ಹುದ್ದೆ ಬೇಕೆಂದು ಬಾಯಿಬಿಟ್ಟು ಹೇಳದಿದ್ದರೂ ಕೊಟ್ಟರೆ ಬೇಡವೆನ್ನುವುದಿಲ್ಲ. ಆದರೆ ಮುಖ್ಯಮಂತ್ರಿ ಡಿಸಿಎಂ ಹುದ್ದೆ ಸೃಷ್ಟಿಗೆ  ನಿರಾಸಕ್ತಿ ವಹಿಸಿರುವುದರಿಂದ ಪರಮೇಶ್ವರ್ ಕೂಡ ಚಕಾರವೆತ್ತಿಲ್ಲ. 

ವೆಬ್ದುನಿಯಾವನ್ನು ಓದಿ