ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗುತ್ತೇನೆ: ಉಮೇಶ್ ಕತ್ತಿ

ಮಂಗಳವಾರ, 16 ಸೆಪ್ಟಂಬರ್ 2014 (10:16 IST)
ಮತ್ತೆ ಪ್ರತ್ಯೇಕ ರಾಜ್ಯದ ಕೂಗನ್ನೆಬ್ಬಿಸಿ ವಿವಾದ ಸೃಷ್ಟಿಸಿರುವ ಮಾಜಿ ಸಚಿವ ಉಮೇಶ ಕತ್ತಿ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ನಾನೇ ಆಗುತ್ತೇನೆ ಎಂದು ಹೇಳಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದರ ಜತೆ  ಮಾತನಾಡುತ್ತಿದ್ದ ಅವರು ನಾನು "ಅಖಂಡ ಕರ್ನಾಟಕದ ಮುಖ್ಯಮಂತ್ರಿಯಾಗಬೇಕೆಂಬ ಕನಸು ಹೊಂದಿದ್ದೆ. ಅದು ಸಾಧ್ಯವಾಗಲಿಲ್ಲ. ಹಾಗಾಗಿ ಪ್ರತ್ಯೇಕ ರಾಜ್ಯ ಸ್ಥಾಪನೆಯಾದಾಗ ಅದರ ಮುಖ್ಯಮಂತ್ರಿಯಾಗುತ್ತೇನೆ "
 
"ಉತ್ತರಕರ್ನಾಟಕ ಸತತವಾಗಿ ನಿರ್ಲಕ್ಷಕ್ಕೆ ಒಳಪಟ್ಟಿರುವುದರಿಂದ ಅಭಿವೃದ್ಧಿಯನ್ನೇ ಕಂಡಿಲ್ಲ. ಹಾಗಾಗಿ ವಿಕಾಶದ ದೃಷ್ಟಿಯಿಂದ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಸ್ಥಾಪನೆಯಾಗಲೇ ಬೇಕು ಮತ್ತು ನಾನು ಆ ರಾಜ್ಯದ ಮುಖ್ಯಮಂತ್ರಿಯಾಗುತ್ತೇನೆ. 10 ವರ್ಷ ಸಚಿವನಾಗಿ ಮತ್ತು 6 ಬಾರಿ ಶಾಸಕನಾಗಿ ಕಾರ್ಯ ನಿರ್ವಹಿಸಿರುವ ನನಗೆ ಮುಖ್ಯಮಂತ್ರಿಯಾಗುವ ಯೋಗ್ಯತೆ ಇದೆ" ಎಂದರು.
 
 ಈ ಮೂಲಕ ಮುಖ್ಯಮಂತ್ರಿ ಪದವಿಯ ಮೇಲಿನ ತಮ್ಮ ಪ್ರಬಲ ಬಯಕೆಯನ್ನವರು ವ್ಯಕ್ತಪಡಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ