ಗಾಂಡೂ ಪದ ಬಳಕೆ ಸಮರ್ಥಿಸಿಕೊಂಡ ಶಾಸಕ ಎಚ್.ಸಿ.ಬಾಲಕೃಷ್ಣ

ಮಂಗಳವಾರ, 23 ಆಗಸ್ಟ್ 2016 (15:58 IST)
ಕಲ್ಲಪ್ಪ ಹಂಡಿಭಾಗ್ ಕುರಿತು ಗಾಂಡೂ ಪದ ಬಳಕೆ ಮಾಡಿರುವುದನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟನೆಗೊಂಡಿರುವ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಸಮರ್ಥಿಸಿಕೊಂಡಿದ್ದಾರೆ.
 
ರಾಮನಗರದ ಬಿಡದಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳ್ಳಿ ಭಾಷೆಯಲ್ಲಿ ಗಾಂಡೂ ಎಂದರೆ ಕೈಲಾಗದವರು ಎಂದರ್ಥ. ಯಾವುದೋ ಕಾರಣಕ್ಕೆ ಕಲ್ಲಪ್ಪ ಹಂಡಿಭಾಗ್ ಅವರು ಆತ್ಮಹತ್ಯೆಗೆ ಶರಣಾಗಿರುವುದು ಸರಿಯಲ್ಲ ಎಂದು ತಮ್ಮ ಉದ್ದಟತನದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
 
ಜೆಡಿಎಸ್ ಪಕ್ಷದಿಂದ ಉಚ್ಚಾಟನೆಗೊಂಡಿರುವ ಶಾಸಕ ಜಮೀರ್ ಅಹ್ಮದ್ ಹಾಗೂ ಚೆಲುವುರಾಯಸ್ವಾಮಿಯೊಂದಿಗೆ ನಾನು ಮೃತ ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಅವರು ಸ್ವಗ್ರಾಮಕ್ಕೆ ತೆರಳಿದ್ದೇವು. ಅವರ ಕುಟುಂಬ ಸದಸ್ಯರು ಆಶ್ರಮ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ ಎಂದು ಹೇಳಿದರು.
 
ಕಲ್ಲಪ್ಪ ಹಂಡಿಭಾಗ್ ಅವರ ತಂದೆ ತಾಯಿ, ಅವರನ್ನು ಕಷ್ಟಪಟ್ಟು ವಿದ್ಯಾಭ್ಯಾಸ ನೀಡಿ, ಅವರನ್ನು ಉನ್ನತ್ತ ಅಧಿಕಾರಿಯನ್ನಾಗಿ ಮಾಡಿದ್ದರು. ಆದರೆ, ಅವರ ಪೋಷಕರ ಕುರಿತು ಯೋಜನೆ ಮಾಡದೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೀಗಾಗಿ ನಾನು ಗಾಂಡೂ ಪದ ಬಳಕೆ ಮಾಡಿದ್ದೇನೆ ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಸ್ಪಷ್ಟನೆ ನೀಡಿದ್ದಾರೆ.
 
ನಿನ್ನೆ ನಡೆದ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಮೃತ ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ ಅವರನ್ನು ಗಾಂಡೂ ಪದ ಬಳೆಕೆ ಮಾಡಿದ್ದರು.

 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ