ಸುಪ್ರೀಂಕೋರ್ಟ್‌ನಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ: ಯಡಿಯೂರಪ್ಪ

ಭಾನುವಾರ, 22 ಫೆಬ್ರವರಿ 2015 (11:10 IST)
ಅರ್ಕಾವತಿ ಬಡಾವಣೆ  ರಾಚೇನ ಹಳ್ಳಿ  ಡಿನೋಟಿಪಿಕೇಶನ್,  ಕಿಕ್ ಬ್ಯಾಕ್ ಪ್ರಕರಣದ ಬಗ್ಗೆ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ  ನನ್ನ ನಿರ್ಧಾವನ್ನು ಅಪರಾಧವೆಂಬಂತೆ ಬಿಂಬಿಸಲಾಗುತ್ತಿದೆ. ನನಗೆ ಸುಪ್ರೀಂಕೋರ್ಟ್‌ನಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಹುಬ್ಬಳ್ಳಿಯಲ್ಲಿ ಹೇಳಿದರು. 
 
ಶಿವಮೊಗ್ಗದಲ್ಲಿ ಗಲಭೆ ಬಗ್ಗೆ ಮಾತನಾಡಿದ ಯಡಿಯೂರಪ್ಪ ಗಲಭೆಗೆ  ಕಾರಣರಾದವರನ್ನು ಕೂಡಲೇ ಬಂಧಿಸಬೇಕು ಎಂದು  ಒತ್ತಾಯಿಸಿದರು. ಬಂದ್‌ಗೆ ಕರೆ ನೀಡಿದ್ದವರಿಗೆ  ಸರ್ಕಾರ ಬೆದರಿಕೆ ಹಾಕುತ್ತಿದೆ ಎಂದೂ ಅವರು ದೂರಿದರು. ರಾಜ್ಯ ಸರ್ಕಾರ ಅನವಶ್ಯಕ ಚರ್ಚೆಗಳನ್ನು ಹುಟ್ಟು ಹಾಕುತ್ತಿದೆ. ದಲಿತ ಸಿಎಂ ಆಗಬೇಕೆಂದು ಒಂದು ಗುಂಪು ಹೇಳುತ್ತಿದೆ. ನಾನೂ ಕೂಡ ದಲಿತ ಎಂದು ಸಿಎಂ ಹೇಳುತ್ತಿದ್ದಾರೆ.

ಈ ಚರ್ಚೆಗಳೆಲ್ಲ ಅನವಶ್ಯಕ . ರಾಜ್ಯದ ಅಭಿವೃದ್ದಿ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಯಡಿಯೂರಪ್ಪ ಹೇಳಿದರು. 2014-15ನೇ ಸಾಲಿನ ಬಜೆಟ್ ಸಿದ್ದಪಡಿಸುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಯಾವುದೇ ಅಂಕಿ ಅಂಶ ಸಂಗ್ರಹಿಸಿಲ್ಲ. ಆರ್ಥಿಕ ಸ್ಥಿತಿ ಚೆನ್ನಾಗಿದ್ದರೂ ರಾಜ್ಯ ಅಭಿವೃದ್ಧಿಯಾಗುತ್ತಿಲ್ಲ ಎಂದು ಅವರು ಹೇಳಿದರು.
 
ಯಡಿಯೂರಪ್ಪ  ವಿರುದ್ದ ಡಿನೋಟಿಫಿಕೇಶನ್ ಪ್ರಕರಣದ ತನಿಖೆ ಬಗ್ಗೆ  ಸುಪ್ರೀಂಕೋರ್ಟ್‌ನಲ್ಲಿ ನಿನ್ನೆ ಅಫಿಡವಿಟ್ ಸಲ್ಲಿಸಿರುವ ಸಿಬಿಐ ಅಧಿಕಾರಿಗಳು ಬಿಎಸ್‌ವೈ ಅವರ ವಿರುದ್ಧ ಹೊರಡಿಸಲಾಗಿರುವ ಚಾರ್ಜ್‌ಶೀಟನ್ನು ರದ್ದುಗೊಳಿಸಬಾರದು. ಅವರು ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದು, ಸಾಕಷ್ಟು ಅವ್ಯವಹಾರ ನಡೆಸಿದ್ದಾರೆ. ಸಾಬೀತುಪಡಿಸಲು ಪೂರಕವಾದ ಎಲ್ಲಾ ಸಾಕ್ಷ್ಯಗಳೂ ಕೂಡ ನಮ್ಮ ಬಳಿ ಇವೆ ಎಂದು ಹೇಳಿದ್ದರು. 

ವೆಬ್ದುನಿಯಾವನ್ನು ಓದಿ