ಸಚಿವ ಸ್ಥಾನದಿಂದ ತೆಗೆದ್ರೆ ರಾಜಕೀಯಕ್ಕೆ ಗುಡ್‌ಬೈ: ಸಚಿವ ರಾಮಲಿಂಗಾರೆಡ್ಡಿ

ಭಾನುವಾರ, 26 ಫೆಬ್ರವರಿ 2017 (11:16 IST)
ಸಚಿವರಾಗಿ ನಾಲ್ಕು ವರ್ಷ ಪೂರೈಸಿದವರಿಗೆ ಕೊಕ್ ನೀಡಲಾಗುತ್ತಿದೆ ಎನ್ನುವ ವರದಿಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವ ರಾಮಲಿಂಗಾರೆಡ್ಡಿ, ನನ್ನನ್ನು ಸಚಿವ ಸ್ಥಾನದಿಂದ ತೆಗೆದಲ್ಲಿ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಗುಡುಗಿದ್ದಾರೆ. 
 
ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಸಚಿವನಾಗಿ ಭ್ರಷ್ಟಾಚಾರರಹಿತ ಸೇವೆ ಮಾಡಿದ್ದೇನೆ. ನನ್ನ ಮೇಲೆ ಯಾವುದೇ ಆರೋಪಗಳಿಲ್ಲ. ಆದ್ದರಿಂದ, ಸಚಿವ ಸ್ಥಾನದಿಂದ ನನ್ನನ್ನು ತೆಗೆಯುವುದು ಸರಿಯಲ್ಲ ಎಂದರು. 
 
ಸಚಿವರಾಗಿದ್ದುಕೊಂಡು ಪಕ್ಷದ ಕೆಲಸವನ್ನು ಅತ್ಯಂತ ಯಶಸ್ವಿಯಾಗಿ ಮಾಡಬಹುದು.ಆದರೆ, ಸಚಿವ ಸ್ಥಾನದಿಂದ ತೆಗೆದುಹಾಕಿದಲ್ಲಿ ಮನೆಗೆ ಹೋಗುತ್ತೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಕಾಂಗ್ರೆಸ್ ಹೈಕಮಾಂಡ್ ಗೆ ಸಾವಿರ ಕೋಟಿ ಕಪ್ಪ ಕೊಟ್ಟಿರುವ ವಿಚಾರ ಒಂದೆಡೆ ಆದ್ರೆ, ಇದೀಗ ಕಾಂಗ್ರೆಸ್ ನಲ್ಲಿ ಭಾರೀ ಬದಲಾವಣೆ ತರಲು ಸಮನ್ವಯ ಸಮಿತಿ ಸಜ್ಜಾಗಿದೆ. ಭಾನುವಾರದಂದು ನಡೆಯಲಿರುವ 20 ಜನ ಸದಸ್ಯರಿರುವ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆಯಲ್ಲಿ ಹಿರಿಯ ಸಚಿವರಿಗೆ ಗೇಟ್ ಪಾಸ್ ನೀಡಲು ಮಹತ್ವದ ಚರ್ಚೆ ನಡೆಯಲಿದೆ.
 
ಡೈರಿ ವಿವಾದ ಭುಗಿಲೆದ್ದಿರುವ ಮಧ್ಯೆ ಇದೀಗ ಸಚಿವರನ್ನು ಕೈ ಬಿಡುವ ಪ್ರಸ್ತಾಪ ಕಾಂಗ್ರೆಸ್ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ