ಈ ಜನ್ಮದಲ್ಲಿ ಬ್ರಿಗೇಡ್ ಒಪ್ಪುವುದಿಲ್ಲ: ಯಡ್ಡಿ

ಭಾನುವಾರ, 22 ಜನವರಿ 2017 (13:16 IST)
ಈ ಜನ್ಮದಲ್ಲಿ ಬ್ರಿಗೇಡ್ ಚಟುವಟಿಗೆ ಒಪ್ಪುವ ಪ್ರಶ್ನೆಯೇ ಇಲ್ಲ, ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್ ಯಡಿಯೂರಪ್ಪ ಕಡ್ಡಿ ಮುರಿದಂತೆ ಹೇಳಿದ್ದಾರೆ.

ಈಶ್ವರಪ್ಪ ಬ್ರಿಗೇಡ್ ಸಭೆಗೆ ಹೋಗುವುದು ಸರಿಯಲ್ಲ.ಇಲ್ಲಿ ಕಾರ್ಯಕಾರಿಣಿ ಸಭೆ ನಡೆಯುತ್ತಿರುವಾಗ ಇನ್ನೆಲ್ಲೋ ಬ್ರಿಗೇಡ್ ಸಮಾವೇಶದಲ್ಲಿ ಪಾಲ್ಗೊಂಡ್ರೆ ತಪ್ಪು ಸಂದೇಶ ಹೋಗುತ್ತೆ. ಅವರಿಗೆ ಯಾವ ಸಂದೇಶವನ್ನು ನೀಡಬೇಕಿತ್ತೋ ಅದನ್ನು ನಿನ್ನೆ ನೀಡಿಯಾಗಿದೆ. ಪಕ್ಷದ ಕಾರ್ಯಕರ್ತರ್ಯಾರು ಕೂಡ ಬ್ರಿಗೇಡ್ ಸಮಾವೇಶದಲ್ಲಿ ಭಾಗವಹಿಸಬಾರದೆಂದು ಸೂಚಿಸಿದ್ದೇವೆ. ರಾಷ್ಟ್ರೀಯ ನಾಯಕರು ಸೂಕ್ತ ಸಮಯದಲ್ಲಿ ಸೂಕ್ತ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸಲಿದ್ದಾರೆ. ಇದನ್ನೆಲ್ಲ ರಾಜ್ಯ ಉಸ್ತುವಾರಿ ಮುರಳೀಧರ ರಾವ್ ಗಮನಕ್ಕೆ ತಂದಿದ್ದೇನೆ ಎಂದು ಯಡ್ಡಿ ಹೇಳಿದ್ದಾರೆ.
 
ಇನ್ನಾದರೂ ಅವರು ತಮ್ಮಲ್ಲಿ ಬದಲಾವಣೆ ಮಾಡಿಕೊಳ್ಳಲಿ. ಪ್ರತಿಪಕ್ಷದ ನಾಯಕರಾಗಿ ಇವೆಲ್ಲವನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಬ್ರಿಗೇಡ್ ವಿಷಯವೊಂದನ್ನು ಬಿಟ್ಟರೆ ನಮ್ಮ ನಡುವೆ ಇನ್ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟ ಪಡಿಸಿದ್ದಾರೆ. 
 
ಪಕ್ಷದ ಸಂಘಟನೆಗೆ ಧಕ್ಕೆಯಾಗಬಾರದು. ಈ ಜನ್ಮದಲ್ಲಿ ಬ್ರಿಗೇಡ್ ಚಟುವಟಿಕೆ ಒಪ್ಪುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಿಎಂ ಗುಡುಗಿದ್ದಾರೆ.
 
ಇನ್ನೊಂದೆಡೆ ಯಡಿಯೂರಪ್ಪ ಅವರ ಮಾತನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಈಶ್ವರಪ್ಪ ಪಕ್ಷದ ಕಾರ್ಯಕಾರಣಿ ಸಭೆ ಬಳಿಕ  ಬ್ರಿಗೇಡ್ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಲು ತೆರಳುವುದಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ