ಬಿಬಿಎಂಪಿ ಫಲಿತಾಂಶ ಅಚ್ಚರಿ, ಆಘಾತ ತಂದಿದೆ: ಮಲ್ಲಿಕಾರ್ಜುನ್ ಖರ್ಗೆ

ಮಂಗಳವಾರ, 25 ಆಗಸ್ಟ್ 2015 (16:36 IST)
ಕಳೆದ ಐದು ವರ್ಷಗಳಿಂದ ಭ್ರಷ್ಟಾಚಾರದಲ್ಲಿ ತೊಡಗಿ ಜನ ಸಾಮಾನ್ಯರಿಗೆ ಮೂಲಸೌಕರ್ಯ ಒದಗಿಸುವಲ್ಲಿ ವಿಫಲವಾಗಿದ್ದ ಬಿಜೆಪಿ ಪಕ್ಷಕ್ಕೆ ಜನತೆ ಬಹುಮತ ನೀಡಿರುವುದು ಅಚ್ಚರಿ ಮತ್ತು ಆಘಾತ ಮೂಡಿಸಿದೆ ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.
 
ಬಿಬಿಎಂಪಿ ಫಲಿತಾಂಶ ರಾಜ್ಯ ಸರಕಾರದ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಪಕ್ಷದ ಸೋಲು ಗೆಲುವಿನ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.
 
ಬಿಜೆಪಿ ಪಕ್ಷ ಕಳೆದ ಅವಧಿಯಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ ನಡೆಸಿದೆ. ಬಿಬಿಎಂಪಿಗೆ ಒಂಬತ್ತು ಸಾವಿರ ಕೋಟಿ ರೂಪಾಯಿಗಳ ಸಾಲದ ಹೊರೆ ನೀಡಿದೆ. ಆದಾಗ್ಯೂ ಮತದಾರರು ಬಿಜೆಪಿಯತ್ತ ಒಲವು ತೋರಿರುವುದು ವಿಪರ್ಯಾಸ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಬಿಜೆಪಿ ನಾಯಕರು ಗಾರ್ಡನ್ ಸಿಟಿಯನ್ನು ಗಾರ್ಬೇಜ್ ಸಿಟಿಯನ್ನಾಗಿ ಪರಿವರ್ತಿಸಿದ್ದನ್ನು ಮತದಾರರು ನೋಡಿದ್ದಾರೆ. ಮೂಲಸೌಕರ್ಯ ಒದಗಿಸದ ಬಗ್ಗೆ ಹಲವಾರು ವೇದಿಕೆಗಳಲ್ಲಿ ಚರ್ಚಿಸಿದ್ದಾರೆ, ಆದರೆ, ಚುನಾವಣೆ ಬಂದಾಗ ಮತ್ತೆ ಬಿಜೆಪಿಯನ್ನು ಆಯ್ಕೆ ಮಾಡಿರುವುದು ದುರ್ದೈವವೇ ಸರಿ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಕಿಡಿಕಾರಿದರು.
 

ವೆಬ್ದುನಿಯಾವನ್ನು ಓದಿ