ಮೈಸೂರಿನಲ್ಲಿ ತರಗೆಲೆಗೆ ಬೆಂಕಿ: 250 ಶ್ರೀಗಂಧ ಮರಗಳ ನಾಶ

ಸೋಮವಾರ, 2 ಮಾರ್ಚ್ 2015 (14:18 IST)
ಕಿಡಿಗೇಡಿಗಳು ಒಣಗಿದ ತರಗೆಲೆಗಳಿಗೆ ಬೆಂಕಿ ಹಚ್ಚಿದ ಪರಿಣಾಮ ಸುಮಾರು 250ಕ್ಕೂ ಹೆಚ್ಚು ಶ್ರೀಗಂಧದ ಮರಗಳು ಬೆಂಕಿಗಾಹುತಿಯಾಗಿರುವ ಘಟನೆ ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿಯಲ್ಲಿರುವ ನಗರದ ಸರ್ಕಾರಿ ಅತಿಥಿ ಗೃಹದ ಆವರಣದಲ್ಲಿ ನಡೆದಿದೆ. 
 
ಪ್ರಸ್ತುತ ಬೇಸಿಗೆ ಆವರಿಸಿರುವ ಹಿನ್ನೆಲೆಯಲ್ಲಿ ಮರದ ಎಲೆಗಳು ಉದುರಿದ್ದವು. ಈ ಎಲೆಗಳು ಉದರಿ ಹಲವು ದಿನಗಳಾಗಿದ್ದ ಕಾರಣ ಬಿಸಿಲಿಗೆ ಒಣಗಿದ್ದವು. ಈ ಎಲೆಗಳಿಗೆ ಬೆಂಕಿ ತಗುಲಿರುವ ಪರಿಣಾಮ ಹಚ್ಚ ಹಸಿರಾಗಿದ್ದ 250ಕ್ಕೂ ಹೆಚ್ಚು ಶ್ರೀಗಂಧ ಗಿಡಗಳು ಬೆಂಕಿಗಾಹುತಿಯಾಗಿವೆ. ಘಟನೆಯು ಹಾಡಗಲೇ ನಡೆದಿದ್ದರೂ ಕೂಡ ಈ ಬಗ್ಗೆ ಕಚೇರಿಯ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. 
 
ಇನ್ನು ಕಚೇರಿಯ ಈ ಆವರಣವು ಅನೈತಿಕ ತಾಣವಾಗಿ ಮಾರ್ಪಟ್ಟಿದ್ದು, ಕಿಡಿಗೇಡಿಗಳು ಬೀಯರ್, ಸಿಗರೇಟ್ ಸೇರಿದಂತೆ ಇನ್ನಿತರೆ ಮಧ್ಯ ವ್ಯಸನ ವಸ್ತುಗಳನ್ನು ತಂದು ವಿಕೃತವಾಗಿ ವರ್ತಿಸುತ್ತಿರುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದು, ಅನೈತಿಕ ಚಟುವಟಿಕೆಗಳಿಗೆಂದು ಬರುವ ಕಿಡಿಗೇಡಿಗಳೇ ಈ ಕೃತ್ಯವನ್ನು ಎಸಗಿದ್ದಾರೆ ಎಂದು ದೂರಿದ್ದಾರೆ. 

ವೆಬ್ದುನಿಯಾವನ್ನು ಓದಿ