ಇನ್ನುಮುಂದೆ ಎಪಿಲ್ ಕಾರ್ಡುಗಳಿಗೂ ಪಡಿತರ: ದಿನೇಶ್ ಗುಂಡೂರಾವ್

ಮಂಗಳವಾರ, 3 ಮಾರ್ಚ್ 2015 (18:38 IST)
ಇಂದು ನಗರದ ವಿಕಾಸಸೌಧದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ಅವರು  ಮಾತನಾಡಿದ್ದು, ಅನ್ನಭಾಗ್ಯ ಯೋಜನೆಯಡಿಯಲ್ಲಿ ಇನ್ನುಮುಂದೆ ಎಪಿಲ್ ಕಾರ್ಡುದಾರರಿಗೂ ಕೂಡ ಪಡಿತರ ವಿತರಿಸಲು ಸರ್ಕಾರ ಚಿಂತಿಸುತ್ತಿದೆ ಎಂದಿದ್ದಾರೆ.  
 
ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರವು ಅನ್ನಭಾಗ್ಯ ಯೋಜನೆಯಡಿಯಲ್ಲಿ ಇನ್ನುಮುಂದೆ ಎಪಿಲ್ ಕಾರ್ಡುದಾರರಿಗೂ ಕೂಡ ಪಡಿತರ ವಿತರಿಸಲು ಸರ್ಕಾರ ಚಿಂತಿಸುತ್ತಿದ್ದು, ಮುಂದಿನ ಬಜೆಟ್ ಅಧಿವೇಶನದಲ್ಲಿ ಈ ಸಂಬಂಧ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಎಣ್ಣೆ, ಬೇಳೆ ಸೇರಿದಂತೆ ಇನ್ನಿತರೆ ಅಗತ್ಯ ಸಾಂಬಾರು ಸಾಮಗ್ರಿಗಳನ್ನೂ ಕೂಡ ವಿತರಿಸಲು ಚಿಂತಿಸಲಾಗುತ್ತಿದೆ ಎಂದರು. 
 
ಇನ್ನು ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆಯುತ್ತಿವೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮೈಸೂರಿನ ಗ್ರಾಮ್ ಸಂಸ್ಥೆ ಅಡಿಯಲ್ಲಿ ವರದಿ ತಯಾರಿಸಲಾಗಿದ್ದು, ವರದಿಯಲ್ಲಿ ಅಧಿಕಾರಿಗಳ ಕಾರ್ಯವೈಖರಿ ಉತ್ತಮ ರೀತಿಯಲ್ಲಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ ಅವರು, ಯೋಜನೆಯಲ್ಲಿ ಅಕ್ರಮ ಮಾರಾಟ, ಸಂಗ್ರಹಣೆ, ನಕಲಿ ಕಾರ್ಡುಗಳಿಗೆ ವಿತರಣೆ ಸೇರಿದಂತೆ ಇನ್ನಿತರೆ ಸಣ್ಣ-ಪುಟ್ಟ ಲೋಪದೋಷಗಳಿದ್ದು, ಅವುಗಳನ್ನೂ ಕೂಡ ಕೂಡಲೇ ಬಗೆಹರಿಸಲಿದ್ದೇವೆ ಎಂದರು. 

ವೆಬ್ದುನಿಯಾವನ್ನು ಓದಿ