ಬೆಂಗಳೂರಿನಲ್ಲಿ ಉಬರ್ ಕಾರ್ ಚಾಲಕ ಅಸಭ್ಯ ವರ್ತನೆ ತೋರಿದ ಘಟನೆ ವರದಿಯಾಗಿದೆ.
ಮಾರ್ಚ್ 22 ಮಂಗಳವಾರ ಸಾಯಂಕಾಲ ಈ ಘಟನೆ ನಡೆದಿದ್ದು ತನ್ನ ಎದುರೇ ಚಾಲಕ ಹಸ್ತಮೈಥುನ ನಡೆಸಿದ್ದಾಗಿ ಕಾರ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ದೂರನ್ನು ದಾಖಲಿಸಿದ್ದಾಳೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆ ಉಬರ್ ಕಾರ್ ಬಾಡಿಗೆ ಪಡೆದು ಬಿಟಿಎಂ ಲೇಔಟ್ಗೆ ಹೊರಟಿದ್ದಳು. ಆದರೆ ಕಾರ್ ಸಿಗ್ನಲ್ನಲ್ಲಿ ನಿಂತಾಗಲೆಲ್ಲ ಚಾಲಕ ಅಸಭ್ಯವಾಗಿ ವರ್ತಿಸಿದ್ದಾನೆ. ಆತ ದುರ್ವರ್ತನೆ ತೋರುತ್ತಿದ್ದರೂ ಮತ್ತೆನಾದರೂ ಅಪಾಯ ಉಂಟುಮಾಡಬಹುದೆಂಬ ಭೀತಿಯಲ್ಲಿ ಮಹಿಳೆಯ ಏನೂ ಮಾತನಾಡದೆ ಕುಳಿತಿದ್ದಾಳೆ. ತಾನು ಇಳಿಯಬೇಕಾದ ಸ್ಥಳ ಬಂದ ಮೇಲೆ ಕೆಳಗಿಳಿದು ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ಮೊದಲು ತಾನೇನು ತಪ್ಪು ಮಾಡಿಲ್ಲವೆಂದು ವಾದಿಸಿದ ಚಾಲಕ ಬಳಿಕ ತನ್ನ ತಪ್ಪನ್ನು ಒಪ್ಪಿಕೊಂಡು ತಪ್ಪಾಗಿದೆ ಎಂದು ಕ್ಷಮೆ ಕೇಳಿದ್ದಾನೆ.