ನಲವತ್ತು ವರ್ಷಗಳ ಹಿಂದೆ ಸಣ್ಣವರಿದ್ದಾಗ ಬಹಳಷ್ಟು ಮಂದಿ ಜಾತ್ರೆ , ಸಂತೆಗಳಲ್ಲಿ ಈ ಬಯೋಸ್ಕೋಪನ್ನು ನೋಡಿದ್ದಿರಬಹುದು. ಅವುಗಳ ಒಳಗೆ ಇಣುಕಿ ಅಂದಿನ ಸಿನಿಮಾತಾರೆಯರ , ತಾಜಮಹಲ್ , ಕೆ ಆರ್ ಎಸ್ ಇತ್ಯಾದಿ ಪ್ರವಾಸಿ ತಾಣಗಳ ಚಿತ್ರಗಳನ್ನ ಕುತೂಹಲದಿಂದ ನೋಡಿರಬಹುದು. ಈಗ ವಾರ್ತಾ ಇಲಾಖೆ ಈ ಬಯೋಸ್ಕೋಪನ್ನು ಮತ್ತೆ ಮರು ಚಲಾವಣೆಗೆ ತಂದಿದೆ.
ಈ ಹಿಂದೆ ನೆಹರು 125 ನೇ ವರ್ಷಾಚರಣೆ , ದೇವರಾಜ ಅರಸು ಶತಮಾನೋತ್ಸವ ಸಂದರ್ಭದಲ್ಲಿ ಈ ಬಯೋಸ್ಕೋಪ್ ಮೂಲಕ ಅವರ ಜೀವನ ಚಿತ್ರಣವನ್ನು ಜನರಿಗೆ ನೀಡಲಾಗಿತ್ತು . ಇದೀಗ ವಾರ್ತಾ ಇಲಾಖೆ ಈ ಬಯೋಸ್ಕೋಪ್ ಮೂಲಕ ಸರ್ಕಾರದ ಜನಪ್ರಿಯ ಹಾಗೂ ಜನಪರ ಕಾರ್ಯಕ್ರಮಗಳನ್ನು ಪ್ರದರ್ಶಿಸುವ ಪ್ರಯತ್ನ ನಡೆಸಿದೆ . ನಮ್ಮ ಈ ಪ್ರಯತ್ನ ನಿಮಗೆ ಆಕರ್ಷಣೆ ಹುಟ್ಟಿಸಿದೆ ಎನ್ನುವ ವಿಶ್ವಾಸ ನಮ್ಮದು ಎನ್ನುತ್ತಾರೆ ವಾರ್ತಾ ಇಲಾಖೆ ನಿರ್ದೇಶಕರಾದ ಎನ್ . ಆರ್ ವಿಶುಕುಮಾರ್ ಅವರು.
ವಾರ್ತಾ ಇಲಾಖೆ ಸದಾ ಹೊಸತನಕ್ಕೆ ತುಡಿಯುವ ಇಲಾಖೆ. ತನ್ನ ಪ್ರಚಾರ ವಿಧಾನಗಳಲ್ಲಿ ಕಾರ್ಯಕ್ರಮಗಳಲ್ಲಿ ಸದಾ ನಾವಿನ್ಯತೆ , ಕುತೂಹಲ, ಆಕರ್ಷಣೆ ಇರಬೇಕೆಂದು ಬಯಸುತ್ತದೆ. ಈ ನಿಟ್ಟಿನಲ್ಲಿ ನಮ್ಮ ಹಳೆಯ ಪ್ರಚಾರ ಉಪಕರಣ ಬಯಾಸ್ಕೋಪಿಗೆ ಮರು ಜೀವ ತುಂಬುವ ಕಾರ್ಯವನ್ನು ಇಲಾಖೆ ಕೈಗೆತ್ತಿ ಕೊಂಡಿದೆ.