ಇನ್‌ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಖಾಸಗಿ ವಾಹನಗಳಿಗೆ ನಿಷೇಧ

ಸೋಮವಾರ, 1 ಫೆಬ್ರವರಿ 2016 (12:27 IST)
ನಡೆಯಲಿರುವುದರಿಂದ ಇಂದಿನಿಂದ 5 ದಿನಗಳ ಕಾಲ ಖಾಸಗಿ ಬಸ್ ಪ್ರವೇಶಗಳಿಗೆ ನಿಷೇಧಿಸಲಾಗಿದೆ.  ಖಾಸಗಿ ಬಸ್‌ಗಳ ನಿಲುಗಡೆಗೆ ನಗರದ ಹೊರವಲಯದಲ್ಲಿ ಸ್ಥಳಾವಕಾಶ ಕಲ್ಪಿಸಲಾಗಿದೆ.  
 
ಇನ್ವೆಸ್ಟ್ ಕರ್ನಾಟಕ ನಡೆಯುವ ಐದು ದಿನ ಮಾತ್ರ ಖಾಸಗಿ ಬಸ್ ಮತ್ತು ಗೂಡ್ಸ್ ವಾಹನಗಳ ಸಂಚಾರಕ್ಕೆ ನಿಷೇಧವಿರುತ್ತದೆ. ಆದರೆ ಕೆಎಸ್ ಆರ್ ಟಿಸಿ ಬಸ್ ಗಳಿಗೆ ಇದು ಅನ್ವಯವಾಗುವುದಿಲ್ಲ. 
 
ನಗರದೊಳಕ್ಕೆ ಖಾಸಗಿ  ಬಸ್ ಗಳು ಹಾಗೂ ಆಲ್ ಇಂಡಿಯಾ ಪರ್ಮಿಟ್ ಬಸ್ ಗಳ ಪ್ರವೇಶವನ್ನು ಫೆ.1ರಿಂದ 5ರವರೆಗೆ  ನಿಷೇಧಿಸಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದ್ದು, ಇದುವರೆಗೆ ಬೆಳಿಗ್ಗೆಯಿಂದ 25ಕ್ಕೂ ಹೆಚ್ಚು ಖಾಸಗಿ ಬಸ್‌ಗಳನ್ನು ತಡೆಹಿಡಿಯಲಾಗಿದೆ.

ನಗರದ ಹೊರವಲಯದಲ್ಲಿ ಖಾಸಗಿ ಬಸ್‍ಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ನಗರದ ಸುತ್ತ ಆರ್‍ಟಿಒ, ಟ್ರಾಫಿಕ್ ಪೊಲೀಸರು ತಪಾಸಣೆ ನಡೆಸಿ, ನಗರ ಪ್ರವೇಶಿಸುವ ಖಾಸಗಿ ಬಸ್‍ಗಳನ್ನು ತಡೆಯುತ್ತಿದ್ದಾರೆ.
 

ವೆಬ್ದುನಿಯಾವನ್ನು ಓದಿ