ಇಂದು ಐಪಿಎಸ್ ಅಧಿಕಾರಿ ಹರೀಶ್ ಅಂತ್ಯಕ್ರಿಯೆ

ಶುಕ್ರವಾರ, 19 ಫೆಬ್ರವರಿ 2016 (11:14 IST)
ಚೆನ್ನೈನಲ್ಲಿ ನಿನ್ನೆ ಮುಂಜಾನೆ ನಿಗೂಢವಾಗಿ ಸಾವನ್ನಪ್ಪಿರುವ ಕರ್ನಾಟಕದ ಐಪಿಎಸ್ ಅಧಿಕಾರಿ ಎನ್. ಹರೀಶ್ ಅವರ ಅಂತ್ಯಕ್ರಿಯೆ ಇಂದು ಅವರ ಹುಟ್ಟೂರು ಕೋಲಾರ  ಜಿಲ್ಲೆಯ ಮಾಲೂರಿನ ಬಂಡೆಹೊಸೂರು ಗ್ರಾಮದಲ್ಲಿ  ಅಂತ್ಯಕ್ರಿಯೆ ನಡೆಯಲಿದೆ.


ಸದ್ಯ ಹರೀಶ್ ಮರಣೋತ್ತರ ಪರೀಕ್ಷೆ ಚೆನ್ನೈನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ನೆರವೇರುತ್ತಿದ್ದು, ಡಾಕ್ಟರ್ ರಾಮಲಿಂಗಮ್ ನೇತೃತ್ವದ ನಾಲ್ಕು ವೈದ್ಯರ ತಂಡ ಮರಣೋತ್ತರ ಪರೀಕ್ಷೆಯನ್ನು ನಡೆಸುತ್ತಿದೆ. ಮರಣೋತ್ತರ ಪರೀಕ್ಷೆಯ ವಿಡಿಯೋ ಚಿತ್ರೀಕರಣವನ್ನು ಸಹ ಮಾಡಲಾಗುತ್ತಿದೆ. 
 
ಮಧ್ಯಾಹ್ನದ ನಂತರ ಪಾರ್ಥಿವ ಶರೀರವನ್ನು ಅವರ ಸಂಬಂಧಿಕರಿಗೆ ನೀಡಲಾಗುತ್ತಿದ್ದು ಇಂದು ಸಂಜೆ ಅವರ ಅಂತ್ಯಕ್ರಿಯೆ ನಡೆಯಲಿದೆ. 
 
ಚೆನ್ನೈನಲ್ಲಿ ಭೃಷ್ಟಾಚಾರ ನಿಗ್ರಹ ದಳದ ಎಸ್‌ಪಿಯಾಗಿದ್ದ ಕೋಲಾರ ಜಿಲ್ಲೆಯ ಹರೀಶ್ 2009ನೇ ಐಪಿಎಸ್ ಬ್ಯಾಚ್‍ನ ತಮಿಳುನಾಡು ಕೇಡರ್ ಅಧಿಕಾರಿಯಾಗಿದ್ದರು. ಆದರೆ ನಿನ್ನೆ ಚೆನ್ನೈನ ಐಪಿಎಸ್ ಅಧಿಕಾರಿಗಳ ಮೆಸ್‍ನಲ್ಲಿ ನಿಗೂಢವಾಗಿ ಮೃತಪಟ್ಟಿದ್ದರು.
 
ಐಪಿಎಸ್ ಅಧಿಕಾರಿ ಹರೀಶ್ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಒಂದೆಡೆ ವೈಯಕ್ತಿಕ ವಿಚಾರ ಕಾರಣವೆಂದು ಹೇಳಲಾಗುತ್ತಿದ್ದರೆ, ಇನ್ನೊಂದೆಡೆ ರಾಜಕೀಯ ಒತ್ತಡ, ಬಡ್ತಿ ಸಿಗಲು ವಿಳಂಬವಾಗುತ್ತಿರುವುದರಿಂದ ಖಿನ್ನತೆಗೊಳಗಾಗಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ