ಸರಕಾರ ಬದುಕಿದ್ಯಾ, ಸತ್ತಿದ್ಯಾ: ಯಡಿಯೂರಪ್ಪ ಗರಂ

ಶನಿವಾರ, 30 ಜುಲೈ 2016 (12:48 IST)
ಧಾರವಾಡ ಪೊಲೀಸರಿಂದ ಮಹದಾಹಿ ಹೋರಾಟಗಾರರ ಮೇಲಿನ ಅಮಾನವೀಯ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಬದುಕಿದ್ಯಾ, ಅಥವಾ ಸತ್ತಿದ್ಯಾ ಎಂದು ಬಿಜೆಪಿ ರಾಜ್ಯಾಧಕ್ಷ ಬಿ.ಎಸ್‌.ಯಡಿಯೂರಪ್ಪ ಗುಡುಗಿದ್ದಾರೆ.
 
ರಾಜ್ಯ ಸರಕಾರ ಹಾಗೂ ಪೊಲೀಸರು ಗುಂಡಾಗಿರಿಯನ್ನು ನಿಲ್ಲಿಸಬೇಕು. ಪ್ರತಿಭಟನಾಕಾರರು ತಪ್ಪು ಮಾಡಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಿ. ಆದರೆ, ಅಮಾಯಕರ ಮೇಲೆ ಹಲ್ಲೆ ಮಾಡಿರುವುದನ್ನು ನಾನು ಖಂಡಿಸುತ್ತೇನೆ ಎಂದು ತಿಳಿಸಿದರು.
 
ಪ್ರತಿಭಟನಾ ನಿರತ ಹೋರಾಟಗಾರರು ಹಾಗೂ ಅಮಾಯಕರ ಮೇಲೆ ಹಲ್ಲೆ ನಡೆಸದಂತೆ ರಾಜ್ಯ ಸರಕಾರ ಹಾಗೂ ಪೊಲೀಸರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ನೊಂದವರ ಪರವಾಗಿ ನಾವು ಸದಾ ಇರುತ್ತೇವೆ ಎಂದು ಬಿಜೆಪಿ ರಾಜ್ಯಾಧಕ್ಷ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.
 
ಶಾಂತಿಯಿಂದ ಪ್ರತಿಭಟಿಸುತ್ತಿರುವ ಅಮಾಯಕ ರೈತರ ಮೇಲೆ ಹಲ್ಲೆ ಮಾಡಲಾಗಿದೆ. ರಾಜ್ಯ ಸರಕಾರ ಗುಂಡಾಗಿರಿ ಮಾಡುತ್ತಿದೆ. ರಾಜ್ಯ ಸರಕಾರ ಬದುಕಿದ್ಯಾ, ಅಥವಾ ಸತ್ತಿದ್ಯಾ ಎಂದು ತಿಳಿಯುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧಕ್ಷ ಬಿ.ಎಸ್‌.ಯಡಿಯೂರಪ್ಪ ರಾಜ್ಯ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ