ಐಸಿಸ್ ಉಗ್ರರ ಉಪಟವಳ: ತುರ್ತು ಸಭೆ ಕರೆದ ರಾಜನಾಥ್

ಶನಿವಾರ, 1 ಆಗಸ್ಟ್ 2015 (11:23 IST)
ಮುಸ್ಲಿಂ ಪ್ರಾಬಲ್ಯವಿರುವ ಅರಬ್ ರಾಜ್ಯಗಳಲ್ಲಿ ಐಎಸ್ಐಎಸ್ ಉಗ್ರರ ಉಪಟವಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶೀಯ ಪ್ರಜೆಗಳನ್ನು ರಕ್ಷಿಸುವ ಸಲುವಾಗಿ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದ್ದು, ಇಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. 
 
ಹೌದು, ಸಭೆಯು ಇಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದ್ದು, ರಾಷ್ಟ್ರದ ರಾಜ್ಯಗಳ ಡಿಜಿಪಿಗಳು ಭಾಗವಹಿಸುತ್ತಿದ್ದು, ಐಸ್ಐಎಸ್ ಉಗ್ರರ ಅಟ್ಟಹಾಸ ಯಾವ ಯಾವ ರಾಷ್ಟ್ರದಲ್ಲಿ ಮುಂದುವರಿದಿದೆ ಹಾಗೂ ಅಲ್ಲಿನ ಭಾರತೀಯರ ಪರಿಸ್ಥಿತಿ ಏನು, ಅವರನ್ನು ಅಲ್ಲಿಂದ ಬೇರೆಡೆಗೆ ಸ್ಥಳಾಂತರಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಚರ್ಚೆ ನಡೆಯಲಿದೆ ಎನ್ನಲಾಗಿದೆ. 
 
ಇನ್ನು ಸಭೆಯಲ್ಲಿ ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ ಎಸ್.ಕೆ.ಪಟ್ನಾಯಕ್ ಹಾಗೂ ಡಿಜಿಪಿ ಓಂಪ್ರಕಾಶ್ ಪಾಲ್ಗೊಳ್ಳಲಿದ್ದು, ನಿನ್ನೆ ಲಿಬಿಯಾದಲ್ಲಿ ನಾಲ್ವರು ಭಾರತೀಯರನ್ನು ಐಸಿಸ್ ಉಗ್ರರು ಅಪಹರಿಸಿದ್ದ ಹಿನ್ನೆಲೆಯಲ್ಲಿ ಈ ತುರ್ತು ಸಭೆ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.  

ವೆಬ್ದುನಿಯಾವನ್ನು ಓದಿ