ಜೈಲಿನಲ್ಲಿ ಐಟಂ ಡ್ಯಾನ್ಸ್: ಮೂವರು ಜೈಲು ಸಿಬ್ಬಂದಿ ಅಮಾನತು

ಗುರುವಾರ, 28 ಜನವರಿ 2016 (18:55 IST)
ಗಣರಾಜ್ಯೋತ್ಸವದ ಅಂಗವಾಗಿ ವಿಜಯಪುರದ ದರ್ಗಾ ಜೈಲು ಆವರಣದೊಳಗೆ ಐಟಂ ಡ್ಯಾನ್ಸ್ ಮಾಡಿದ ವಿಡಿಯೋ ದೃಶ್ಯಗಳನ್ನು ಟಿವಿ ಚಾನೆಲ್‌ಗಳು ಪ್ರಸಾರ ಮಾಡಿದ ಬಳಿಕ ಇಬ್ಬರು ಜೈಲು ಅಧಿಕಾರಿಗಳು ಮತ್ತು ಒಬ್ಬ ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
 
 ಜೈಲಿನ ಉಸ್ತುವಾರಿ ಪಿ.ಎಸ್.ಅಂಬೇಕರ್, ವಾರ್ಡನ್ ಸಂಪತ್ ಮತ್ತು ಹೆಡ್ ಕಾನ್‌ಸ್ಟೇಬರ್ ಗುಂಡಳ್ಳಿಯವರನ್ನು ವಿಜಯಪುರ ಜಿಲ್ಲಾ ಸೂಪರಿಂಟೆಂಡೆಂಟ್ ಸಿದ್ದರಾಮಪ್ಪ, ಡಿ.ಜಿಪಿ. ಸತ್ಯನಾರಾಯಣ ಅವರ ವರದಿಯನ್ನು ಆಧರಿಸಿ ಅಮಾನತುಗೊಳಿಸಲಾಯಿತು. 
 
ವಿಡಿಯೋ ದೃಶ್ಯಾವಳಿಯಲ್ಲಿ ಐಟಂ ನೃತ್ಯ ಮಾಡುತ್ತಿದ್ದ ಮಹಿಳೆಯತ್ತ ಕೆಲವರು ಕರೆನ್ಸಿ ನೋಟುಗಳನ್ನು ಎಸೆಯುತ್ತಿದ್ದ ದೃಶ್ಯ ಪ್ರಸಾರವಾಗಿತ್ತು.  ಸನ್ನಡತೆ ಆಧಾರದ ಮೇಲೆ 38 ಕೈದಿಗಳನ್ನು ಬಿಡುಗಡೆ ಮಾಡಿದ ಬಳಿಕ ಈ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಮುಂತಾದ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು. 
 ಬೆಂಗಳೂರಿನ ಪೊಲೀಸ್ ತಂಡ ಘಟನೆಯನ್ನು ಆಮೂಲಾಗ್ರವಾಗಿ ತನಿಖೆ ಮಾಡಿ ಐಟಂ ಡ್ಯಾನ್ಸ್ ವ್ಯವಸ್ಥೆ ಮಾಡಿದ್ದು ಯಾರೆಂದು ಪತ್ತೆಹಚ್ಚುವುದಾಗಿ ರಾವ್ ತಿಳಿಸಿದ್ದಾರೆ. ಕೈದಿಗಳ ಅಕ್ರಮ ಚಟುವಟಿಕೆ ಮತ್ತು ಕೆಟ್ಟ ವರ್ತನೆ ಕುರಿತು ಕಟ್ಟೆಚ್ಚರ ವಹಿಸುವಂತೆ ರಾವ್ ಅಧಿಕಾರಿಗಳಿಗೆ ತಿಳಿಸಿದ್ದು,  ಕೈದಿಗಳು ಮೊಬೈಲ್ ಬಳಸದಂತೆ ಜ್ಯಾಮರ್‌ಗಳನ್ನು ಜೈಲಿನ ಆವರಣದಲ್ಲಿ ಅಳವಡಿಸುವುದಾಗಿ ತಿಳಿಸಿದರು. 
 

ವೆಬ್ದುನಿಯಾವನ್ನು ಓದಿ