ದುಬೈ ನಿವಾಸಿ ಈಮೇಲ್ ಹ್ಯಾಕ್: ಖಾತೆಯಿಂದ 20 ಲಕ್ಷ ಅಪಹರಣ

ಮಂಗಳವಾರ, 6 ಮೇ 2014 (17:27 IST)
ದುಬೈನಲ್ಲಿ ಕೆಲಸ ಮಾಡುತ್ತಿರುವ ಮಹ್ಮದ್ ಜಫ್ರುಲ್ಲಾ ಖಾನ್ ಎಂಬವರ ಕೆನರಾ ಬ್ಯಾಂಕ್ ಖಾತೆಯಿಂದ ದುಷ್ಕರ್ಮಿಗಳು 20 ಲಕ್ಷ ರೂ. ಹಣವನ್ನು ಲಪಟಾಯಿಸಿದ ಘಟನೆ ಬೆಳಕಿಗೆ ಬಂದಿದೆ.  ಏಪ್ರಿಲ್ 28ರಂದು  ಬ್ಯಾಂಕ್ ಮ್ಯಾನೇಜರ್‌ಗೆ ಮೇಲ್ ಬರುತ್ತದೆ.  ನನ್ನ ಖಾತೆಯಿಂದ 20 ಲಕ್ಷ ರೂ. ಹಣವನ್ನು ಬೇರೆ ಖಾತೆಗೆ ವರ್ಗಾಯಿಸುವಂತೆ ಈ ಮೇಲ್ ‌ನಲ್ಲಿ ತಿಳಿಸಲಾಗಿತ್ತು.

ಜಫ್ರುಲ್ಲಾ ಖಾನ್ ಅವರ ಅಸಲಿ ಇಮೇಲ್ ಎಂದೇ ಭಾವಿಸಿದ ಮ್ಯಾನೇಜರ್ 20 ಲಕ್ಷ ರೂ. ಹಣವನ್ನು ಅವರು ಹೇಳಿದ ಖಾತೆಯ ನಂಬರ್‌ಗೆ ವರ್ಗಾಯಿಸಿದ್ದರು. ಆದರೆ ಜಫ್ರುಲ್ಲಾ ಖಾತೆಯನ್ನು ಹ್ಯಾಕ್ ಮಾಡಿ ಬ್ಯಾಂಕ್ ಮ್ಯಾನೇಜರ್‌ಗೆ ಮೇಲ್ ಕಳಿಸಿದ್ದ ವಿಷಯ ತಿಳಿದುಬರದೇ ಮ್ಯಾನೇಜರೇ ಬೇಸ್ತುಬಿದ್ದಿದ್ದರು.

ಕೆಲವು ದಿನಗಳ ನಂತರ ನಂತರ ಜಫ್ರುಲ್ಲಾ 4 ಲಕ್ಷ ರೂ. ತೆಗೆಯುವ ಬಗ್ಗೆ  ಕೆನರಾ ಬ್ಯಾಂಕ್  ಮ್ಯಾನೇಜರ್‌ಗೆ ಮೇಲ್ ಮಾಡಿದಾಗ ತಮ್ಮ ಖಾತೆಯಿಂದ 20 ಲಕ್ಷ ರೂ. ಹಣವನ್ನು ಲಪಟಾಯಿಸಿರುವ ವಿಷಯ ತಿಳಿದು ಹೌಹಾರಿದರು.  ಲಂಡನ್ ವಿನ್‌ಸ್ಟನ್ ನಗರದಲ್ಲಿ ಜಫ್ತುಲ್ಲಾ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆದಿರುವುದು ಕೂಡ ಗೊತ್ತಾಯಿತು. 

ವೆಬ್ದುನಿಯಾವನ್ನು ಓದಿ