ಭೂಪರಭಾರೆಯಲ್ಲಿ ಸಿಲುಕಿದ ಜಗದೀಶ್ ಶೆಟ್ಟರ್: ಒಕ್ಕಲಿಗರ ಸಂಘ ಆರೋಪ

ಮಂಗಳವಾರ, 29 ಜುಲೈ 2014 (11:28 IST)
ಅರ್ಕಾವತಿ ಬಡಾವಣೆ ಡಿನೋಟಿಫಿಕೇಶನ್ ಹಗರಣದಲ್ಲಿ ಸಿಬಿಐ ತನಿಖೆಗೆ ಒತ್ತಾಯಿಸುತ್ತಿರುವ ಬಿಜೆಪಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಈಗ ಸ್ವತಃ ಮತ್ತೊಂದು ಭೂ ವಿವಾದದಲ್ಲಿ ಸಿಲುಕಿದ್ದಾರೆ.  ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ  ಅಕ್ರಮವಾಗಿ ಭೂಮಿ ಮಂಜೂರು ಮಾಡಿದ್ದಾರೆ ಎಂದು ಒಕ್ಕಲಿಗರ ಸಂಘ ಆರೋಪಿಸಿದೆ.

ಒಕ್ಕಲಿಗರ ಸಂಘದ ನಿರ್ದೇಶಕ ಪ್ರಸಾದ್, ಪ್ರಧಾನ ಕಾರ್ಯದರ್ಶಿ ನಾಗರಾಜ್ ಈ ಆರೋಪ ಮಾಡಿದ್ದಾರೆ.   ಸಾರ್ವಜನಿಕ , ಅರೆ ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಟ್ಟ  ಶ್ರೀಗಂಧಕಾವಲ್‌ನಲ್ಲಿರುವ, 200 ಕೋಟಿ ರೂ. ಮೌಲ್ಯದ  ನಾಲ್ಕು ಎಕರೆ ಭೂಮಿಯನ್ನು ಶೆಟ್ಟರ್ ಪರಭಾರೆ ಮಾಡಿದ್ದಾರೆಂದು ಅವರು ಆರೋಪಿಸಿದ್ದಾರೆ.  

ಒಕ್ಕಲಿಗರ ಸಂಘ, ಗೋಲ್ಡನ್ ವ್ಯಾಲಿ ಎಜುಕೇಶನ್ ಟ್ರಸ್ಟ್‌ಗೆ ಸೇರಿದ ಈ ಭೂಮಿ  ಬೆಂಗಳೂರು ಉತ್ತರ ತಾ. ಯಶವಂತಪುರ ಹೋಬಳಿಯ ಗ್ರಾಮದಲ್ಲಿದೆ.  ಸ್ವಾತಂತ್ರ್ಯಹೋರಾಟಗಾರರೊಬ್ಬರ ಪುತ್ರನಿಗೆ ಭೂಮಿಯನ್ನು ಮಂಜೂರು ಮಾಡಿದ ಬಳಿಕ ಅದನ್ನು  ರಿಯಲ್ ಎಸ್ಟೇಟ್ ಉದ್ಯಮಿಗೆ ಹಸ್ತಾಂತರ ಮಾಡಲಾಗಿದೆ ಎಂದು ಒಕ್ಕಲಿಗರ ಸಂಘ ಆರೋಪಿಸಿದೆ. 

ವೆಬ್ದುನಿಯಾವನ್ನು ಓದಿ