ಮತ್ತೆ ಪ್ರಕಾಶ್ ರೈ ‘ಗಂಡಸ್ಸುತನ’ ಕೆಣಕಿದ ನವರಸನಾಯಕ ಜಗ್ಗೇಶ್

ಸೋಮವಾರ, 19 ಫೆಬ್ರವರಿ 2018 (08:29 IST)
ಬೆಂಗಳೂರು: ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರಿದ ಪ್ರಕಾಶ್ ರೈಗೆ ಸವಾಲು ಹಾಕಿದ್ದ ನವರಸನಾಯಕ ಜಗ್ಗೇಶ್ ಇದೀಗ ಮತ್ತೊಮ್ಮೆ ಗುಟುರು ಹಾಕಿದ್ದಾರೆ.
 

ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರನ ಹಲ್ಲೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಖಾಸಗಿ ವಾಹಿನಿಯೊಂದು ಪ್ರಕಾಶ್ ರೈ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಗೆ ಕಳೆದ ತಿಂಗಳು ಕಾರ್ಯಕ್ರಮವೊಂದರಲ್ಲಿ ಹೊಗಳಿದ ವಿಡಿಯೋ ಪ್ರಸಾರ ಮಾಡಿತ್ತು.

ಈ ವಿಡಿಯೋ ಪ್ರಸಾರವಾಗುತ್ತಿದ್ದಂತೆ ಟ್ವೀಟ್ ಮಾಡಿದ ಜಗ್ಗೇಶ್ ‘ಈಗ ಪಕ್ಕ ಅರಿವಾಯಿತು ತಾವು ಕಾಂಗ್ರೆಸ್ ಪಕ್ಷದ ಮುಖವಾಡದ ಒಳಗಿನ ಅನುಯಾಯಿ ಎಂದು! ನನಗೆ ಜನ ಹೇಳುತ್ತಿದ್ದರು ನಾನು ನಂಬಿರಲಿಲ್ಲ! ಈಗಲೂ ಕೇಳುವೆ ಪ್ರದರ್ಶಿಸಿ ರಾಜಕೀಯ ಪ್ರವೇಶಕ್ಕೆ ಗಂಡಸ್ಸುತನ..! ಐ ಮೀನ್ ಹೋರಾಟ! ನಾನು ರಂಗದ ಮೇಲೆ ನಟಿಸುವವರ ಇಷ್ಟಪಡುವೆ..! ಸೈಡ್ ವಿಂಗ್ ನ ನಕಲಿ ನಟರನ್ನು ಅಲ್ಲ! ಅದ್ಭುತ ನಟನ ಕವಲುದಾರಿ ನಡೆ ನೋಡಿ ದುಃಖವಾಯಿತು!’ ಎಂದು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ