ಜಲ್ಲಿಕಟ್ಟು ಬಿಕ್ಕಟ್ಟು: ಕೋಲಾರದಲ್ಲೂ ಪ್ರತಿಭಟನೆ

ಭಾನುವಾರ, 22 ಜನವರಿ 2017 (13:58 IST)
ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟಿಗೆ ಬೆಂಬಲಿಸಿ ಕರ್ನಾಟಕದ ಕೋಲಾರದಲ್ಲಿ ಪ್ರತಿಭಟನೆ ಆರಂಭವಾಗಿದೆ.

 
ತಮಿಳುನಾಡಿನ ಹೆಚ್ಚಿನ ಪ್ರಭಾವ ಇರುವ, ತಮಿಳಿಗರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಕೆಜಿಎಫ್‌ನಲ್ಲಿ ಇಂದು ಮುಂಜಾನೆ 10 ಗಂಟೆಗೆ  ಜಲ್ಲಿಕಟ್ಟು ಮೇಲಿನ ನಿರ್ಬಂಧ ತೆರವುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ಆರಂಭಿಸಲಾಯಿತು. 
 
10ಗಂಟೆಯಿಂದ ಆರಂಭವಾದ ಪ್ರತಿಭಟನೆ 2 ಗಂಟೆಗಳ ಕಾಲ ಮುಂದುವರೆಯಿತು. ಪ್ರತಿಭಟನಾಕಾರರು ರಸ್ತೆ ತಡೆಯಲು ಯತ್ನಿಸಿದಾಗ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು. ಹೀಗಾಗಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.
 
ಕೋಲಾರ ಜಿಲ್ಲೆಯ ಗಡಿಭಾಗದ ಆಂಧ್ರ ಪ್ರದೇಶದ ಗುಡಿಪಲ್ಲಿ ಮಂಡಲದ ಕೊತ್ತಪಲ್ಲಿಯಲ್ಲಿ ಕಳೆದವಾರ ಜಲ್ಲಿಕಟ್ಟು ಆಟದ ಪ್ರದರ್ಶನ ನಡೆಸಲಾಗಿತ್ತು.
 
ಇನ್ನೊಂದೆಡೆ ಜಲ್ಲಿಕಟ್ಟಿಗೆ ಶಾಶ್ವತ ಕಾನೂನು ಬೇಕೆಂದು ಆಗ್ರಹಿಸಿ ತಮಿಳುನಾಡಿನಲ್ಲಿ ಪ್ರತಿಭಟನೆಯನ್ನು ಮುಂದುವರೆಸಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ