ಉರ್ದುವಿನಲ್ಲಿ ಪತ್ರ ಕಳಿಸಿದ್ದರೆ ಜಮೀರ್‌ಗೆ ಅರ್ಥವಾಗ್ತಿತ್ತು: ಕುಮಾರಸ್ವಾಮಿ

ಬುಧವಾರ, 3 ಸೆಪ್ಟಂಬರ್ 2014 (12:22 IST)
ಜೆಡಿಎಸ್‌ನಲ್ಲಿ ಎಲ್ಲವೂ ಸರಿಯಿದೆ ಎಂದು ಹೇಳಲಾಗುತ್ತಿದ್ದರೂ ಎಲ್ಲವೂ ಸರಿಯಿಲ್ಲ ಎನ್ನುವ ಅನುಮಾನ ಕಾಡುತ್ತಿದ್ದು, ಪಕ್ಷದ ವರಿಷ್ಠರ ವಿರುದ್ಧ ಜಮೀರ್ ಅಹ್ಮದ್ ಮುನಿಸಿಕೊಂಡಿದ್ದಾರೆ. ಜೆಡಿಎಸ್ ಶಾಸಕಾಂಗ ಸಭೆಗೆ ಹಾಜರಾಗುವಂತೆ ನನ್ನ ಕೈಗೆ ಯಾವುದೇ ಆಹ್ವಾನ ಪತ್ರ ಮುಟ್ಟಿಲ್ಲ. ನಾನು ಕ್ಷೇತ್ರದ ಕಾರ್ಯಕ್ರಮವನ್ನು ಹಾಕಿಕೊಂಡಿರುವುದರಿಂದ  ಜೆಡಿಎಲ್‌ಪಿ ಸಭೆಗೆ ಹಾಜರಾಗುವುದಿಲ್ಲ ಎಂದು ಜಮೀರ್ ಹೇಳಿದ್ದಾರೆ.

ಆದರೆ ಕುಮಾರಸ್ವಾಮಿ ವಾದವೇ ಬೇರೆ ತೆರನಾಗಿದ್ದು, ನನ್ನನ್ನು ಆಯ್ಕೆ ಮಾಡಿದ ಜಮೀರ್ ಅಹ್ಮದ್ ಅವರಿಗೆ ಎರಡು ಪತ್ರಗಳನ್ನು ಕಳಿಸಿದ್ದೆ. ಆದರೆ ಬಹುಶಃ ಅವರಿಗೆ ಅರ್ಥವಾಗಿಲ್ಲವೆಂದು ಕಾಣುತ್ತಿದೆ. ಇಂಗ್ಲಿಷ್ ಅಥವಾ  ಉರ್ದುವಿನಲ್ಲಿ ಬರೆದಿದ್ದರೆ ಅರ್ಥವಾಗುತ್ತಿತ್ತೇನೋ.

ಆದರೆ ಕನ್ನಡದಲ್ಲಿ ಕಳಿಸಿ ಅಪಚಾರ ಮಾಡಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.  ಗೊಂದಲಗಳ ನಿವಾರಣೆಗೆ ಇಂದು ಸಭೆ ಕರೆದಿದ್ದೇವೆ. ಪಕ್ಷದ ಬಗ್ಗೆ ಅಸಮಾಧಾನವಿದ್ರೆ ಪಕ್ಷ ಬಿಡಬಹುದು ಎಂದು ಕುಮಾರಸ್ವಾಮಿ ಹೇಳಿದರು.

ವೆಬ್ದುನಿಯಾವನ್ನು ಓದಿ